ಉಡುಪಿ: ದುಬೈಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿರುವ ನಿಟ್ಟೂರು ಪ್ರೌಢಶಾಲೆ ಹಳೆವಿದ್ಯಾರ್ಥಿ ರಾಜೇಶ್ ಭಟ್ ಕೊರೊನಾದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೀಡಲು 50 ಸಾವಿರ ರೂ. ದೇಣಿಗೆ ನೀಡಿದ್ದು, ಅದನ್ನು ಶಾಲೆಯ 10 ಮಂದಿ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ.ನಂತೆ ಭಾನುವಾರ ಇಲ್ಲಿನ ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್, ರಾಜೇಶ್ ಅವರಂತೆ ಆರ್ಥಿಕವಾಗಿ ಸಬಲರಾದ ಬಳಿಕ ತಮ್ಮ ಪರಿಸರದ ಸಮಾಜದ ನೊಂದವರಿಗೆ ನೆರವು ನೀಡಿದಲ್ಲಿ ನೆಮ್ಮದಿಯ ಸಮಾಜ ನಿರ್ಮಾಣ ಸಾಧ್ಯ. ರಾಜೇಶ್ ಅವರು ಬೆಂಗಳೂರಿನ 50 ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವ ಸಾಮಾಗ್ರಿ ನೀಡಿ ನೆರವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ವಿ. ಭಟ್, ಹಳೆವಿದ್ಯಾರ್ಥಿ ಪಿ. ಕೃಷ್ಣಮೂತರ್ಿ ಭಟ್, ಶಿಕ್ಷಕ ಎಚ್. ಎನ್ ಶೃಂಗೇಶ್ವರ ಇದ್ದರು