ಸುದ್ದಿಕಿರಣ ವರದಿ
ಗುರುವಾರ, ಜುಲೈ 28
ಸುರತ್ಕಲ್ ನಲ್ಲಿ ಯುವಕನ ಕೊಲೆ
ಸುರತ್ಕಲ್: ಕಾರಿನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಗಳು ಕಾಟಿಪಳ್ಳ ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ (23) ಎಂಬಾತನನ್ನು ಹಿಗ್ಗಾಮುಗ್ಗಾ ಮಾರಕಾಯುಧಗಳಿಂದ ಥಳಿಸಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಶುಕ್ರವಾರ ತನ್ನ ಹುಟ್ಟುಹಬ್ಬ ಆಚರಿಸಲಿದ್ದ, ಸುರತ್ಕಲ್ ನ ಕೈಗಾರಿಕೆಯೊಂದರಲ್ಲಿ ಕೋಕ್ ಟ್ರಾನ್ಸ್ ಪೋರ್ಟ್ ಉದ್ಯಮ ನಡೆಸುತ್ತಿದ್ದ ಫಾಝಿಲ್, ಶೂ ಹಾಗೂ ಸ್ಮಾರ್ಟ್ ವಾಚು ಖರೀದಿಸಲು ಮಳಿಗೆಯೊಂದಕ್ಕೆ ತೆರಳಿದ್ದಾಗ ಅಟ್ಟಾಡಿಸಿಕೊಂಡು ಬಂದ ತಂಡ ಈ ಕೃತ್ಯ ಎಸಗಿದೆ.
ಪ್ರೀತಿ ಪ್ರೇಮ ವಿಚಾರದಲ್ಲಿ ಕೊಲೆ?
ಲವ್ ವಿಷಯದಲ್ಲಿ ಸುನ್ನಿ ಮುಸಲ್ಮಾನ ಸಮುದಾಯದ ತಂಡ ಮತ್ತು ಷೀಯಾ ಮುಸಲ್ಮಾನ ಸಮುದಾಯದ ತಂಡದ ನಡುವೆ ಮಾರಾಮಾರಿ ನಡೆದು ಕೊಲೆಯಲ್ಲಿ ಪರ್ಯವಸಾನವಾಗಿದೆ.
ಮೇಲ್ಜಾತಿ ಸುನ್ನಿ ಮುಸಲ್ಮಾನರ ಯುವತಿಯನ್ನು ಪ್ರೀತಿಸಿದ ಕೆಳಜಾತಿಯ ಷೀಯಾ ಮುಸಲ್ಮಾನ ಯುವಕನ ಮೇಲೆ ತಲವಾರು ದಾಳಿ ನಡೆಸಿ ಕೊಲೆ ಮಾಡಲಾಗಿದೆ.
ಗಾಯಾಳು ಮೃತನಾಗಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.
ಸುರತ್ಕಲ್ ಪರಿಸರದಲ್ಲಿ ಅಘೋಷಿತ ಬಂದ್ ಗೆ ಕರೆ ನೀಡಿದ್ದು, ಸುರತ್ಕಲ್ ಪರಿಸರದ 4 ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಶಾಸಕ ಯು. ಟಿ. ಖಾದರ್ ಆಗ್ರಹಿಸಿದ್ದಾರೆ.