Monday, August 15, 2022
Home ಸಮಾಚಾರ ಅಪರಾಧ ಸೆಂಟ್ರಿಂಗ್ ಸೊತ್ತು ಕಳವು ಆರೋಪಿಗಳ ಬಂಧನ

ಸೆಂಟ್ರಿಂಗ್ ಸೊತ್ತು ಕಳವು ಆರೋಪಿಗಳ ಬಂಧನ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 26

ಸೆಂಟ್ರಿಂಗ್ ಸೊತ್ತು ಕಳವು ಆರೋಪಿಗಳ ಬಂಧನ
ಉಡುಪಿ: ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಸೆಂಟ್ರಿಂಗ್ ಸೊತ್ತುಗಳು ಕಳವಾಗುತ್ತಿರುವ ಬಗ್ಗೆ ಉಮೇಶ ತೆಂಕನಿಡಿಯೂರು ನೀಡಿದ ದೂರಿನಂತೆ, ತನಿಖೆಯ ಬಲೆ ಬೀಸಿದ ಪೊಲೀಸರು ಕಳವು ಮಾಡುತ್ತಿದ್ದ ಆರೋಪಿಗಳನ್ನು ಸೊತ್ತು ಸಹಿತ ದಸ್ತಗಿರಿ ಮಾಡಿದ್ದಾರೆ.

ಸುಮಾರು 1.10 ಲಕ್ಷ ರೂ. ಮೌಲ್ಯದ 600 ಸೆಂಟ್ರಿಂಗ್ ಶೀಟ್ ಮತ್ತು 5- 6 ಸೆಟ್ ಪಿಲ್ಲರ್ ಬಾಕ್ಸ್ ಕಳವಾಗಿರುವ ಬಗ್ಗೆ ಮಲ್ಪೆ ಠಾಣೆಗೆ ದೂರು ನೀಡಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಸುಬ್ರಹ್ಮಣ್ಯ ನಗರ ನಿವಾಸಿ ದೀಪಕ್ (19), ಕಲ್ಯಾಣಪುರ ಸಸಿತೋಟ ಸಾಗರ್ (36), ಪರಂಗಿಪೇಟೆ ನಿವಾಸಿ ಇಮ್ತಿಯಾಜ್ ಎ. (39) ಮತ್ತು ಬಜಾಲ್ ಮೊಹಮ್ಮದ್ ಇಕ್ಬಾಲ್ (35) ಎಂಬವರನ್ನು ದಸ್ತಗಿರಿ ಮಾಡಿ ಅವರು ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸೆಂಟ್ರಿಗ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಅವುಗಳ ಅಂದಾಜು ಮೌಲ್ಯ 1.80 ಲಕ್ಷ ರೂ. ಆಗಿದೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!