Wednesday, August 10, 2022
Home ಸಮಾಚಾರ ರಾಜ್ಯ ವಾರ್ತೆ ಹಿಜಾಬ್ ವಿವಾದ: ನಾಳೆ ವಿಚಾರಣೆ

ಹಿಜಾಬ್ ವಿವಾದ: ನಾಳೆ ವಿಚಾರಣೆ

ಸುದ್ದಿಕಿರಣ ವರದಿ
ಬುಧವಾರ, ಫೆಬ್ರವರಿ 9

ಹಿಜಾಬ್ ವಿವಾದ: ನಾಳೆ ವಿಚಾರಣೆ
ಬೆಂಗಳೂರು: ಹಿಜಾಬ್ ವಿವಾದ ಕುರಿತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ವಿಸ್ತೃತ ಪೀಠದ ಮುಂದೆ ಇಟ್ಟಿದ್ದು, ಇದೀಗ ಮುಖ್ಯ ನ್ಯಾಯಮೂರ್ತಿ ಋತುರಾಜ್ ಆವಸ್ಥಿ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ವಿಸ್ತೃತ ಪೀಠ ರಚಿಸಿದ್ದಾರೆ.

ಅಲ್ಲದೇ ಅರ್ಜಿಯ ವಿಚಾರಣೆ ನಾಳೆ ಅಪರಾಹ್ನ 2.30ಕ್ಕೆ ಆರಂಭವಾಗಲಿದೆ.

ಈ ಕುರಿತಂತೆ ಆದೇಶ ಹೊರಡಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಆವಸ್ಥಿ ಅವರು, ಹಿಜಾಬ್ ವಿವಾದದ ಅರ್ಜಿಯ ವಿಚಾರಣೆ ಕುರಿತಂತೆ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡಂತ ವಿಶೇಷ ನ್ಯಾಯಪೀಠ ರಚಿಸಲಾಗಿದೆ. ತಮ್ಮನ್ನೂ ಒಳಗೊಂಡಂತೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಖಾಜಿ ಜೈಬುನ್ನೀಸಾ ಮೊಹಿಯುದ್ಧೀನ್ ಅರನ್ನೊಳಗೊಂಡ ಪೀಠ ನಾಳೆ ಅಪರಾಹ್ನ 2.30ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!