Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಅನಾಚಾರ ನಿರ್ಬಂಧಿಸಿ

ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಅನಾಚಾರ ನಿರ್ಬಂಧಿಸಿ

ಹೊಸ ವರ್ಷಾಚರಣೆ ನೆಪದಲ್ಲಿ ನಡೆಯುವ ಅನಾಚಾರ ನಿರ್ಬಂಧಿಸಿ

ಉಡುಪಿ: ಹೊಸ ವರ್ಷಾಚರಣೆ ನೆಪದಲ್ಲಿ ಡಿ. 31ರ ರಾತ್ರಿ ನಡೆಯುವ ಅನಾಚಾರಗಳನ್ನು ನಿರ್ಬಂಧಿಸುವಂತೆ ಹಿಂದೂ ಜನ ಜಾಗೃತಿ ಸಮಿತಿ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಿದೆ.

ದೇಶದಾದ್ಯಂತ ಹೆಚ್ಚುತ್ತಿರುವ ಪಾಶ್ಚಾತ್ಯ ಕೆಟ್ಟ ರೂಢಿಗಳ ಅಂಧಾನುಕರಣೆಯಿಂದಾಗಿ ಹೊಸ ವರ್ಷದ ಹೆಸರಿನಲ್ಲಿ ಡಿ. 31ರ ಮಧ್ಯರಾತ್ರಿ ಧೂಮ್ರಪಾನ, ಮದ್ಯಪಾನ, ಅಮಲು ಪದಾರ್ಥಗಳ ಸೇವನೆ, ಪಾರ್ಟಿಗಳ ಆಯೋಜನೆ ಹೆಚ್ಚಾಗಿರುತ್ತದೆ ಮತ್ತು ಆ ರಾತ್ರಿ ಮದ್ಯಪಾನ ಮಾಡಿ ಅತಿವೇಗದಿಂದ ವಾಹನಗಳ ಓಡಿಸುವುದೂ ಹೆಚ್ಚಾಗಿದ್ದು ಅವರಲ್ಲಿ ಸಣ್ಣವಯಸ್ಸಿನ ಯುವಕರು, ಯುವತಿಯರು ಮತ್ತು ಮಹಿಳೆಯರೂ ಇರುತ್ತಾರೆ.

ಅಂಥ ಸಮಯದಲ್ಲಿ ಅನೇಕ ಮಹಿಳೆಯರ ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ಘಟನೆಗಳೂ ನಡೆಯುತ್ತವೆ.

ಈ ಎಲ್ಲಾ ಆಚರಣೆಗಳಿಂದಾಗಿ ಕೊರೊನಾ ಮಹಾಮಾರಿ ಹರಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.

ಆದ್ದರಿಂದ ಡಿ. 31ರ ರಾತ್ರಿ ನಗರದ ರಸ್ತೆಯಲ್ಲಿ ಹೊಸ ವರ್ಷಾಚರಣೆಯನ್ನು ಪೂರ್ಣವಾಗಿ ನಿಷೇಧಿಸಬೇಕು.

ಅಂದು ಕೋಟೆಗಳು, ಪ್ರವಾಸಿ ತಾಣಗಳು, ಐತಿಹಾಸಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ಹಾಗೂ ಮದ್ಯ ಸೇವನೆಯ ಪಾರ್ಟಿಗಳನ್ನು ಆಯೋಜಿಸುವುದನ್ನು ನಿಷೇಧಿಸುವ ಆದೇಶವನ್ನು ನೀಡಬೇಕು.

ಅಂಥ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ದಳ ನಿಯೋಜಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಜಿಲ್ಲಾ ಸಮ್ವಯಕಾರ ವಿಜಯ ಕುಮಾರ, ಪ್ರಮುಖರಾದ ಶ್ರೀನಿವಾಸ ಪ್ರಭು, ಸುಬ್ಬಣ್ಣ ನಾಯಕ್, ಶ್ರೀನಿವಾಸ ಗಾವಸ್ಕರ್, ದಿನೇಶ್, ವಿಶ್ವನಾಥ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!