Thursday, July 7, 2022
Home ಸಮಾಚಾರ ಗ್ರಾ. ಪಂ. ಪ್ರಥಮ ಹಂತದ ಚುನಾವಣೆ: 556 ಮತಗಟ್ಟೆ ಸ್ಥಾಪನೆ

ಗ್ರಾ. ಪಂ. ಪ್ರಥಮ ಹಂತದ ಚುನಾವಣೆ: 556 ಮತಗಟ್ಟೆ ಸ್ಥಾಪನೆ

ಉಡುಪಿ: ಜಿಲ್ಲೆಯಲ್ಲಿ ಈ ತಿಂಗಳ 22ರಂದು ನಡೆಯುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗಾಗಿ ಒಟ್ಟು 556 ಮತಗಟ್ಟೆ ಸ್ಥಾಪಿಸಲಾಗಿದೆ. ಉಡುಪಿ ತಾಲೂಕಿನ 16, ಬ್ರಹ್ಮಾವರ ತಾಲೂಕಿನ 27, ಬೈಂದೂರು ತಾಲೂಕಿನ 15 ಮತ್ತು ಹೆಬ್ರಿ ತಾಲೂಕಿನ 9 ಗ್ರಾ. ಪಂ. ಸೇರಿದಂತೆ ಒಟ್ಟು 67 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದ್ದಾರೆ.

ಮತಗಟ್ಟೆಗಳ ವಿವರ
ಉಡುಪಿ ತಾಲೂಕಿನಲ್ಲಿ 124 ಸಾಮಾನ್ಯ, 28 ಸೂಕ್ಷ್ಮ ಮತ್ತು 9 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 161 ಮತಗಟ್ಟೆಗಳಿವೆ. ಹೆಬ್ರಿಯಲ್ಲಿ 62 ಮತಗಟ್ಟೆಗಳಿದ್ದು, ಬೈಂದೂರಿನಲ್ಲಿ 104 ಸಾಮಾನ್ಯ, 14 ಸೂಕ್ಷ್ಮ ಮತ್ತು 10 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 128 ಮತಗಟ್ಟೆಗಳಿವೆ. ಬ್ರಹ್ಮಾವರದಲ್ಲಿ 158 ಸಾಮಾನ್ಯ ಮತ್ತು 47 ಸೂಕ್ಷ್ಮ ಸೇರಿದಂತೆ ಒಟ್ಟು 205 ಮತಗಟ್ಟೆಗಳಿವೆ. ಒಟಟು 448 ಸಾಮಾನ್ಯ, 89 ಸೂಕ್ಷ್ಮ, 19 ಅತೀ ಸೂಕ್ಷ್ಮ ಸೇರಿದಂತೆ ಒಟ್ಟು 556 ಮತಗಟ್ಟೆಗಳಿವೆ.

ಮೊದಲನೇ ಹಂತದ ಚುನಾವಣೆಗೆ ಉಡುಪಿಯಲ್ಲಿ 16 ಮಂದಿ ಚುನಾವಣಾಧಿಕಾರಿ ಮತ್ತು 20 ಮಂದಿ ಸಹಾಯಕ ಚುನಾವಣಾಧಿಕಾರಿಗಳು, ಬ್ರಹ್ಮಾವರದಲ್ಲಿ 27 ಮಂದಿ ಚುನಾವಣಾಧಿಕಾರಿಗಳು ಮತ್ತು 27 ಮಂದಿ ಸಹಾಯಕ ಚುನಾವಣಾಧಿಕಾರಿಗಳು, ಬೈಂದೂರಿನಲ್ಲಿ 16 ಮಂದಿ ಚುನಾವಣಾಧಿಕಾರಿಗಳು ಮತ್ತು 17 ಮಂದಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಹೆಬ್ರಿಯಲ್ಲಿ 9 ಮಂದಿ ಚುನಾವಣಾಧಿಕಾರಿಗಳು ಮತ್ತು 9 ಸಹಾಯಕ ಚುನಾವಣಾಧಿಕಾರಿಗಳು ಸೇರಿದಂತೆ ಒಟ್ಟು 68 ಮಂದಿ ಚುನಾವಣಾಧಿಕಾರಿಗಳು ಮತ್ತು 73 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ಹಾಗೂ 4 ನೋಡೆಲ್ ಮಂದಿ ಅಧಿಕಾರಿಗಳನ್ನು ನೇಮಿಸಲಾಗಿದೆ.

3.77 ಲಕ್ಷ ಮತದಾರು
ಉಡುಪಿಯಲ್ಲಿ 53,159 ಪುರುಷ ಮತ್ತು 57,281 ಮಹಿಳಾ ಮತದಾರರು, ಬ್ರಹ್ಮಾವರದಲ್ಲಿ 66,684 ಪುರುಷ ಮತ್ತು 71,970 ಮಹಿಳಾ ಮತದಾರರು, ಬೈಂದೂರಿನಲ್ಲಿ 42,910 ಪುರುಷ ಮತ್ತು 44,822 ಮಹಿಳಾ ಮತದಾರರು ಹಾಗೂ ಹೆಬ್ರಿಯಲ್ಲಿ 19,654 ಪುರುಷ 20,621 ಮಹಿಳಾ ಮತದಾರರೂ ಸೇರಿದಂತೆ ಒಟ್ಟು 1,82,407 ಪುರುಷ, 1,94,694 ಮಹಿಳಾ ಮತ್ತು 6 ಮಂದಿ ಇತರ ಮತದಾರರು ಸೇರಿದಂತೆ ಒಟ್ಟು 3,77,107 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!