Wednesday, July 6, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ರಾಜಕೀಯ ಸ್ವಾರ್ಥಕ್ಕೆ ಹಿಂದೂ ವಿರೋಧಿ ಮೈತ್ರಿಕೂಟ ಬಳಕೆ

ರಾಜಕೀಯ ಸ್ವಾರ್ಥಕ್ಕೆ ಹಿಂದೂ ವಿರೋಧಿ ಮೈತ್ರಿಕೂಟ ಬಳಕೆ

ಸುದ್ದಿಕಿರಣ ವರದಿ
ಭಾನುವಾರ, ಜೂನ್ 12

ರಾಜಕೀಯ ಸ್ವಾರ್ಥಕ್ಕೆ ಹಿಂದೂ ವಿರೋಧಿ ಮೈತ್ರಿಕೂಟ ಬಳಕೆ
ಪಣಜಿ: ಎಲ್ಲಿಯವರೆಗೆ ಆಡಳಿತ ವ್ಯವಸ್ಥೆ ಹಿಂದೂಗಳ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲವೋ ಅಲ್ಲಿಯ ವರೆಗೆ ಹಿಂದೂ ರಾಷ್ಟ್ರಕ್ಕಾಗಿ ಹೋರಾಟ ಅನಿವಾರ್ಯ ಎಂದು ಹಿಂದೂ ಜನಜಾಗೃತಿ ಸಮಿತಿ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಚಾರುದತ್ತ ಪಿಂಗಳೆ ಹೇಳಿದರು.

ಗೋವಾದ ಪೋಂಡಾದಲ್ಲಿ ಆಯೋಜಿಸಿರುವ 10ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಉದ್ಘಾಟನೆ ಸಂದರ್ಭ ಮಾತನಾಡಿದರು.

ಕರ್ನಾಟಕದಲ್ಲಿ ಪೆಹಲೆ ಹಿಜಾಬ್, ಬಾದ್ಮೆ ಕಿತಾಬ್ ಎಂಬ ಅಭಿಯಾನವನ್ನು ಮೂಲಭೂತವಾದಿಗಳು ವಿದ್ಯಾರ್ಥಿನಿಯರ ಮೂಲಕ ಆರಂಭಿಸಿದ್ದರು. ಅವರ ವಿರುದ್ಧ ಉಚ್ಛ ನ್ಯಾಯಾಲಯ ತೀರ್ಪು ನೀಡಿದ ನಂತರವೂ ಹಿಜಾಬ್ ಗಾಗಿ ಕೆಲವರು ಒತ್ತಾಯಿಸಿದರು. ಅವರಿಗೆ ಕುರಾನ್ ಶ್ರೇಷ್ಠವೇ ಅಥವಾ ದೇಶದ ಸಂವಿಧಾನ ಶ್ರೇಷ್ಠವೇ ಎಂದು ದೇಶದ ಯಾವುದೇ ಸೆಕ್ಯುಲರ್ ವಾದಿಗಳು ಪ್ರಶ್ನಿಸಲಿಲ್ಲ ಎಂದು ವಿಷಾದಿಸಿದರು.

ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನಮ್ಮ ಸಾಂವಿಧಾನಿಕ ಹಕ್ಕು, ಪ್ರಸ್ತುತ ಭಾರತದಲ್ಲಿ ಸಕ್ರಿಯವಿರುವ ಹಿಂದೂ ವಿರೋಧಿ ಅಲಾಯನ್ಸ್ ಹಿಂದೆ ರಾಜಕೀಯ ಸ್ವಾರ್ಥವಿದೆ. ಈ ಅಜೆಂಡಾ ಹಿಂದೂ ರಾಷ್ಟ್ರದ ಮುಂದಿರುವ ದೊಡ್ಡ ಸವಾಲು ಎಂದರು.

ಭಾರತೀಯ ಆರ್ಥಿಕತೆಯ ಮೇಲೆ ಹೊಸ ದಾಳಿ- ಹಲಾಲ್ ಜಿಹಾದ್ ಗ್ರಂಥವನ್ನು ಹಿಂದೂ ಫ್ರೆಂಟ್ ಫಾರ್ ಜಸ್ಟೀಸ್ ನ ಡಾ| ಹರಿಶಂಕರ ಜೈನ್, ಭಾರತ ಸೇವಾಶ್ರಮ ಸಂಘದ ಸ್ವಾಮಿ ಸಂಯುಕ್ತಾನಂದ ಮಹಾರಾಜ್, ಇಂಟರ್ ನ್ಯಾಷನಲ್ ವೇದಾಂತ ಸೊಸೈಟಿಯ ಸ್ವಾಮಿ ನಿರ್ಗುಣಾನಂದಗಿರಿ ಮಹಾರಾಜ್ ಮೊದಲಾದವರು ಬಿಡುಗಡೆ ಮಾಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!