Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಆರೂರು ತಿಮ್ಮಪ್ಪ ಶೆಟ್ಟಿ ಭಾರತ ಸೇವಾದಳ ರಾಜ್ಯ ಕಾರ್ಯಕಾರಿಣಿಗೆ

ಆರೂರು ತಿಮ್ಮಪ್ಪ ಶೆಟ್ಟಿ ಭಾರತ ಸೇವಾದಳ ರಾಜ್ಯ ಕಾರ್ಯಕಾರಿಣಿಗೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಆರೂರು ತಿಮ್ಮಪ್ಪ ಶೆಟ್ಟಿ ಭಾರತ ಸೇವಾದಳ ರಾಜ್ಯ ಕಾರ್ಯಕಾರಿಣಿಗೆ
ಉಡುಪಿ: ಭಾರತ ಸೇವಾದಳ ರಾಜ್ಯ ಕಾರ್ಯಕಾರಿಣಿಗೆ ಉಡುಪಿ ಜಿಲ್ಲಾ ಭಾರತ ಸೇವಾದಳದ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಆಯ್ಕೆಯಾಗಿದ್ದಾರೆ.

ಭಾರತ ಸೇವಾದಳ ಸಂಸ್ಥೆಯಲ್ಲಿ ಶಾಖಾ ನಾಯಕರಾಗಿ, ತಾಲೂಕು ಅಧಿನಾಯಕರಾಗಿ, 12 ವರ್ಷ ಉಡುಪಿ ಜಿಲ್ಲಾ ಭಾರತ ಸೇವಾದಳ ಜಿಲ್ಲಾ ಸಂಘಟಕರಾಗಿ ಜಿಲ್ಲಾದ್ಯಂತ ಸಂಚರಿಸಿ ಸೇವಾದಳ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಭಾವೈಕ್ಯತಾ ಮೇಳ ಸಂಘಟಿಸಿದ್ದಾರೆ.

ಮುಖ್ಯೋಪಾಧ್ಯಾರಾಗಿ, ಕ್ಷೇತ್ರ ಸಂಪನ್ಮೂಲವ್ಯಕ್ತಿಯಾಗಿ, ಸೇವಾದಳದ ವಿವಿಧ ಶಿಬಿರಾಧಿಪತಿಯಾಗಿ ಹಲವು ಶಿಕ್ಷಕರ ತರಬೇತಿ, ನಾಯಕತ್ವ ತರಬೇತಿ, ಪುನಶ್ಚೇತನ ಶಿಬಿರಗಳನ್ನು ಸಂಘಟಿಸಿದ್ದಾರೆ. ರಾಷ್ಟ್ರಧ್ವಜ ಸಂಹಿತೆ, ಧ್ವಜಾರೋಹಣ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಶಿಬಿರಗಳನ್ನು ಜಿಲ್ಲೆಯಾದ್ಯಂತ ನಡೆಸಿಕೊಟ್ಟಿದ್ದಾರೆ.

ರೋಟರಿ ಸಹಿತ ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, 14 ವರ್ಷಗಳ ಕಾಲ ಉಡುಪಿ ಟೀಚರ್ಸ್ ಕೋ- ಅಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ನೀಡಿದ್ದಾರೆ. ಇದೀಗ ಭಾರತ ಸೇವಾದಳದ ಕೇಂದ್ರ ಸಮಿತಿಯ ಕಾರ್ಯಕಾರಿಣಿ ಸದಸ್ಯರಾಗಿ ರಾಜ್ಯ ಚುನಾವಣಾಧಿಕಾರಿ ಹಾಗೂ ರಾಜ್ಯ ದಳಪತಿ ಎಚ್. ಎಸ್. ಚಂದ್ರಶೇಖರ್ 2022- 27ರ ವರೆಗಿನ ಐದು ವರ್ಷ ಅವಧಿಗೆ ರಾಜ್ಯ ಸದಸ್ಯತ್ವದ ಪ್ರಮಾಣಪತ್ರ ನೀಡಿ ಅಭಿನಂದಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!