Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಕೇಂದ್ರ ಲಲಿತಕಲಾ ಅಕಾಡೆಮಿ ಚಿತ್ರ ಪ್ರದರ್ಶನದಲ್ಲಿ ಆಸ್ಟ್ರೋಮೋಹನ್ `ಶುಭೋದಯ'

ಕೇಂದ್ರ ಲಲಿತಕಲಾ ಅಕಾಡೆಮಿ ಚಿತ್ರ ಪ್ರದರ್ಶನದಲ್ಲಿ ಆಸ್ಟ್ರೋಮೋಹನ್ `ಶುಭೋದಯ’

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19

ಕೇಂದ್ರ ಲಲಿತಕಲಾ ಅಕಾಡೆಮಿ ಚಿತ್ರ ಪ್ರದರ್ಶನದಲ್ಲಿ ಆಸ್ಟ್ರೋ ಮೋಹನ್ ಶುಭೋದಯ
ಉಡುಪಿ: ಕೇಂದ್ರ ಲಲಿತ ಕಲಾ ಅಕಾಡೆಮಿ ಆಯೋಜಿಸಿರುವ 62ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ಉದಯವಾಣಿ ಮಣಿಪಾಲ ಆವೃತ್ತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಚಿತ್ರ ಕಲಾಕೃತಿ ಶುಭೋದಯ ಪ್ರದರ್ಶನಕ್ಕಿಡಲಾಗಿದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ತೆಗೆಯಲಾದ ಈ ಚಿತ್ರ ಕೃತಿ, ಕಲಾಚಿತ್ರ ವಿಭಾಗದಲ್ಲಿ ಆಯ್ಕೆಗೊಂಡಿರುವುದು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ.

ದೇಶದ 2,351 ಕಲಾವಿದರಿಂದ 5,450 ಕಲಾಕೃತಿಗಳು ಆಯ್ಕೆಗಾಗಿ ಬಂದಿದ್ದು, ಆ ಪೈಕಿ ಕೇವಲ 300 ಕಲಾಕೃತಿಗಳನ್ನು ಮಾತ್ರ ಪ್ರದರ್ಶನಕ್ಕಾಗಿ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಆಸ್ಟ್ರೋ ಮೋಹನ್ ಅವರ ಕಲಾಕೃತಿಯೂ ಒಂದು ಎಂಬುದು ಹೆಮ್ಮೆಯ ಸಂಗತಿ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!