Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಬ್ಯಾಂಕ್ ಖಾಸಗೀಕರಣ ವಿರುದ್ಧ ಪ್ರತಿಭಟನೆ

ಬ್ಯಾಂಕ್ ಖಾಸಗೀಕರಣ ವಿರುದ್ಧ ಪ್ರತಿಭಟನೆ

ಉಡುಪಿ: ಸುಧಾರಣೆ ನೆಪದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಅ. ಭಾ. ಬ್ಯಾಂಕ್ ಯೂನಿಯನ್ ಸಂಯುಕ್ತ ವೇದಿಕೆ ಕರೆ ನೀಡಿರುವ ರಾಷ್ಟ್ರವ್ಯಾಪಿ ದ್ವಿದಿನ ಸಾರ್ವತ್ರಿಕ ಪ್ರತಿಭಟನೆಗೆ ಉಡುಪಿಯಲ್ಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಲ್ಲಿನ ಕೋರ್ಟ್ ಶಾಖೆಯ ಕೆನರಾ ಬ್ಯಾಂಕ್ ಶಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಯೂನಿಯನ್ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ (ಯು.ಎಫ್.ಬಿ.ಯು) ಸಂಚಾಲಕ ಹೆರಾಲ್ಡ್ ಡಿ’ಸೋಜಾ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಆರ್ಥಿಕ ಸುಧಾರಣೆ ಹೆಸರಿನಲ್ಲಿ ಈ ಬಾರಿಯ ಕೇಂದ್ರ ಸರ್ಕಾರದ ಮುಂಗಡಪತ್ರದಲ್ಲಿ ಬ್ಯಾಂಕುಗಳ ಖಾಸಗೀಕರಣ ಸೇರಿದಂತೆ ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕವಾದ ಕೆಲವು ಅಂಶಗಳನ್ನು ಘೋಷಿಸಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರ ತಪ್ಪು ಹೆಜ್ಜೆ ಇರಿಸುತ್ತಿದೆ. ಬ್ಯಾಂಕ್ ವಿಲೀನಗೊಳಿಸುವ ಮೂಲಕ ತಪ್ಪು ನಿರ್ಣಯ ತಳೆದಿರುವ ಕೇಂದ್ರ ಸರ್ಕಾರ ಇದೀಗ ಖಾಸಗೀಕರಣಗೊಳಿಸಲು ಹೊರಟಿರುವುದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಕೇಂದ್ರ ಸರ್ಕಾದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಖಂಡಿಸಿದರು.

ಎಐಬಿಇಎ ಮುಖಂಡ ರಮೇಶ್, ಎಐಬಿಓಸಿ ಮುುಂದಾಳು ಅಶೋಕ್ ಕೋಟ್ಯಾನ್, ಎನ್.ಸಿ.ಬಿ.ಇ.ಯ ಸುಪ್ರಿಯಾ, ಎಐಬಿಓಎಯ ರವಿಶಂಕರ್, ಬಿ.ಇ.ಎಫ್.ಐ.ನ ರವೀಂದ್ರ, ಕೆನರಾ ಬ್ಯಾಂಕಿನ ಮರಿಯೋ ಮಥಾಯಿಸ್, ಅವಿನಾಶ್ ಹೆಗ್ಡೆ ಮತ್ತು ಪ್ರೇಮನಾಥ್ ಪೂಜಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಾಗೇಶ್ ನಾಯಕ್, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ರಾಮಮೋಹನ್, ಸಿಐಟಿಯುನ ಬಾಲಕೃಷ್ಣ ಶೆಟ್ಟಿ ಮುಂತಾದವರಿದ್ದರು.

ಪ್ರತಿಭಟನಾ ಕೆನರಾ ಬ್ಯಾಂಕಿನ ವರದರಾಜ್ ಮತ್ತು ಪ್ರವೀಣ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮನೋಜ್ ಕುಮಾರ್ ಕಲ್ಮಾಡಿ ಮತ್ತು ರಮೇಶ್, ಬ್ಯಾಂಕ್ ಆಫ್ ಬರೋಡದ ರಮೇಶ್ ಮತ್ತು ವಿದ್ಯಾ, ಯೂಕೋ ಬ್ಯಾಂಕಿನ ಸೂರಜ್, ಕರ್ಣಾಟಕ ಬ್ಯಾಂಕಿನ ನಿತ್ಯಾನಂದ, ವಿವಿಧ ಸಂಘಟನೆಗಳ ಪ್ರಮುಖರಾದ ಜಯನ್ ಮಲ್ಪೆ, ಸುರೇಖಾ ಮುಂತಾದವರು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!