Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಬಸ್ರೂರು ರಾಜೀವ ಶೆಟ್ಟಿ ಅವರಿಗೆ ರೆಡ್ ಕ್ರಾಸ್ ಸಭಾಪತಿ ಸ್ಥಾನ ಹಸ್ತಾಂತರ

ಬಸ್ರೂರು ರಾಜೀವ ಶೆಟ್ಟಿ ಅವರಿಗೆ ರೆಡ್ ಕ್ರಾಸ್ ಸಭಾಪತಿ ಸ್ಥಾನ ಹಸ್ತಾಂತರ

ಬಸ್ರೂರು ರಾಜೀವ ಶೆಟ್ಟಿ ಅವರಿಗೆ ರೆಡ್ ಕ್ರಾಸ್ ಸಭಾಪತಿ ಸ್ಥಾನ ಹಸ್ತಾಂತರ

ಉಡುಪಿ, ನ. 24 (ಸುದ್ದಿಕಿರಣ ವರದಿ): ಇಲ್ಲಿನ ರೆಡ್ ಕ್ರಾಸ್ ಸಭಾಪತಿ ಸ್ಥಾನವನ್ನು ಹಾಲಿ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಅವರು ಬಸ್ರೂರು ರಾಜೀವ ಶೆಟ್ಟಿ ಅವರಿಗೆ ಬುಧವಾರ ಹಸ್ತಾಂತರಿಸಿದರು.

ಆ ಮೂಲಕ ಸಭಾಪತಿ ಸ್ಥಾನದ ಬಗ್ಗೆ ಇದ್ದ ವಿವಾದ ನ್ಯಾಯಾಲಯದಿಂದ ಇತ್ಯರ್ಥಗೊಂಡು, ಬಸ್ರೂರು ರಾಜೀವ ಶೆಟ್ಟಿ ಅವರಿಗೆ ಜಯ ಲಭಿಸಿದಂತಾಗಿದೆ. ಇದೇ ವೇಳೆ ಗೌರವ ಕಾರ್ಯದರ್ಶಿ ಹುದ್ದೆಯನ್ನೂ ಬಾಲಕೃಷ್ಣ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

ಬಸ್ರೂರು ರಾಜೀವ ಶೆಟ್ಟಿ ವಿರುದ್ಧ ಆರೋಪದ ಹಿನ್ನೆಲೆಯಲ್ಲಿ ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಜಿ. ಜಗದೀಶ ಅವರು ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನಕ್ಕಾಗಿ ನೇಮಿಸಿದ್ದರು. ಈ ಕುರಿತು ಬಸ್ರೂರು ರಾಜೀವ ಶೆಟ್ಟಿ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು.

ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ ಮತ್ತು ರೇಖಾ ಅವರು ಪ್ರಕರಣ ಕೈಗೆತ್ತಿಕೊಂಡು ತಲ್ಲೂರು ಶಿವರಾಮ ಶೆಟ್ಟಿ, ಎಸ್. ನಾಗಣ್ಣ ಮತ್ತು ಜಿ. ಜಗದೀಶ್ ವಿರುದ್ಧ ನ್ಯಾಯಾಂಗ ನಿಂದನೆ ಆದೇಶ ನೀಡಿದ್ದು, ಬಸ್ರೂರು ರಾಜೀವ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಆದೇಶ ನೀಡಿದರು.

ಈ ಹಿನ್ನೆಲೆಯಲ್ಲಿ ಇಂದು ಬಸ್ರೂರು ರಾಜೀವ ಶೆಟ್ಟಿ ಅವರಿಗೆ ಸಭಾಪತಿ ಸ್ಥಾನ ಹಾಗೂ ಕಾರ್ಯದರ್ಶಿ ಸ್ಥಾನವನ್ನು ಬಾಲಕೃಷ್ಣ ಶೆಟ್ಟಿ ಅವರಿಗೆ ಹಸ್ತಾಂತರಿಸಲಾಯಿತು.

2020ರ ನ. 12ರ ಪೂರ್ವಾನ್ವಯದಂತೆ ಮುಂದಿನ 3 ವರ್ಷಗಳ ಕಾಲ ಅಂದರೆ 2022ರ ಅ. 4ರ ವರೆಗೆ ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ನ್ಯಾಯಾಲಯ ಸೂಚಿಸಿದೆ.

ಈಮಧ್ಯೆ, ಅನಧಿಕೃತವಾಗಿ ನೇಮಕಗೊಂಡ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಜಯರಾಮ ಆಚಾರ್ಯ ಮತ್ತು ಸನ್ಮತ್ ಹೆಗ್ಡೆ ವಿರುದ್ಧ ಉಡುಪಿ ಜಿಲ್ಲಾ ನ್ಯಾಯಾಲಯದ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ನಿರ್ಮಲಾ ತಾತ್ಕಾಲಿಕ ನಿರ್ಬಂಧನ ಆದೇಶ ನೀಡಿದ್ದಾರೆ ಎಂದು ಬಸ್ರೂರು ರಾಜೀವ ಶೆಟ್ಟಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!