Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಲೊಂಬಾರ್ಡ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಲೊಂಬಾರ್ಡ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಸುದ್ದಿಕಿರಣ ವರದಿ
ಬುಧವಾರ, ಜೂನ್ 15

ಲೊಂಬಾರ್ಡ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ
ಉಡುಪಿ: ಇಲ್ಲಿನ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಬುಧವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಶಿಬಿರ ಉದ್ಘಾಟಿಸಿದ ಬಡಗಬೆಟ್ಟು ಸೊಸೈಟಿ ನಿಕಟಪೂರ್ವ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇಂದ್ರಾಳಿ, ರಕ್ತವನ್ನು ದಾನಿಗಳ ಮೂಲಕ ಪಡೆಯಬೇಕೇ ಹೊರತು ಕೋಟಿ ರೂ. ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.

ರಕ್ತದಲ್ಲಿ ಜಾತಿ, ಧರ್ಮ, ಪಕ್ಷ ಎಂಬುದಿಲ್ಲ. ಆ ವಿಚಾರದಲ್ಲಿ ದೇವರು ನಮ್ಮನ್ನೆಲ್ಲರನ್ನೂ ಸಮಾನರಾಗಿ ಸೃಷ್ಟಿಸಿದ್ದಾನೆ.

ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ನಾಲ್ಕು ಜೀವಗಳನ್ನು ಉಳಿಸಬಹುದು ಎಂದರು.

ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತನ್ನಾ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಮಿಯ್ಯತುಲ್ ಫಲಾಹ್ ಉಡುಪಿ ಘಟಕ ಅಧ್ಯಕ್ಷ ಖಾಸಿಂ ಬಾರಕೂರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಕುಂದಾಪುರ ಅಧ್ಯಕ್ಷ ಎಸ್. ಜಯಕರ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಮಣಿಪಾಲ ಕಾರ್ಯದರ್ಶಿ ಚಂದ್ರಶೇಖರ ರಾವ್, ಉಡುಪಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಸಾಲ್ಯಾನ್, ಸತ್ಯದ ತುಳುವೆರ್ ಸಂಘಟನೆ ಸ್ಥಾಪಕಾಧ್ಯಕ್ಷ ಪ್ರವೀಣ್, ಬ್ಲಡ್ ಹೆಲ್ಪ್ ಕೇರ್ ಆಡಳಿತಾಧಿಕಾರಿ ಅಜ್ಮಲ್ ಅಸದಿ, ನೇವಲ್ ಕೆಡೆಟ್ ಎಲ್.ವಿ.ಎಸ್ ಮೆನೇಜಸ್, ಲಿಯೋ ಅಧ್ಯಕ್ಷ ಜಾಯ್ ಫೆರ್ನಾಂಡಿಸ್, ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ., ಬಡಗಬೆಟ್ಟು ಸೊಸೈಟಿ ಜಿಎಂ ರಾಜೇಶ್ ಇದ್ದರು.

ಆಸ್ಪತ್ರೆಯ ಪಿಆರ್.ಓ ರೋಹಿ ರತ್ನಾಕರ್ ಸ್ವಾಗತಿಸಿದರು. ಡಾ. ಸ್ವೀನಾ ವಂದಿಸಿದರು. ಸೋನಿಕ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!