Sunday, July 3, 2022
Home ಸಮಾಚಾರ ಅಪರಾಧ ಉದ್ಯಮಿ ಗುಂಡಿಕ್ಕಿಕೊಂಡು ಆತ್ಮಹತ್ಯೆ

ಉದ್ಯಮಿ ಗುಂಡಿಕ್ಕಿಕೊಂಡು ಆತ್ಮಹತ್ಯೆ

ಸುದ್ದಿಕಿರಣ ವರದಿ
ಗುರುವಾರ, ಮೇ 26

ಉದ್ಯಮಿ ಗುಂಡಿಕ್ಕಿಕೊಂಡು ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಚಿನ್ಮಯಿ ಆಸ್ಪತ್ರೆ ಮಾಲೀಕ, ಉದ್ಯಮಿ ಭೋಜಣ್ಣ ಎಂದೇ ಖ್ಯಾತರಾದ ಕಟ್ಟೆ ಗೋಪಾಲಕೃಷ್ಣ (80) ಸ್ವಂತ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೋಟೇಶ್ವರ ಬಳಿಯ ಪುರಾಣಿಕ ರಸ್ತೆಯ ಕುದುರೆಬೆಟ್ಟುನಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬವರ ಮನೆಯ ಸಿಟೌಟ್ ನಲ್ಲಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಗರ್ಭ ಶ್ರೀಮಂತರಾಗಿರುವ ಕಟ್ಟೆ ಭೋಜಣ್ಣ ಗಂಗೊಳ್ಳಿ, ತಲ್ಲೂರು, ಬೈಂದೂರು, ಬೆಂಗಳೂರುಗಳಲ್ಲಿ ಹೋಟೆಲ್, ಬಟ್ಟೆ ಅಂಗಡಿ ಮೊದಲಾದ ವ್ಯವಹಾರ ನಡೆಸುತ್ತಿದ್ದರು.

ಮೊಗವೀರ ಸಮುದಾಯದ ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!