Saturday, August 13, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಡಿಜಿಟಲ್ ಮಾಧ್ಯಮ ನಿಯಂತ್ರಣ: ಕಾನೂನು ರೂಪಿಸಲು ಕೇಂದ್ರ ಹುನ್ನಾರ?

ಡಿಜಿಟಲ್ ಮಾಧ್ಯಮ ನಿಯಂತ್ರಣ: ಕಾನೂನು ರೂಪಿಸಲು ಕೇಂದ್ರ ಹುನ್ನಾರ?

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 15

ಡಿಜಿಟಲ್ ಮಾಧ್ಯಮ ನಿಯಂತ್ರಣ: ಕಾನೂನು ರೂಪಿಸಲು ಕೇಂದ್ರ ಹುನ್ನಾರ?
ನವದೆಹಲಿ: ದೇಶದಲ್ಲಿ ಡಿಜಿಟಲ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊಸ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

ಒಂದು ವೇಳೆ ಕಾನೂನು ಜಾರಿಗೆ ಬಂದಲ್ಲಿ ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಯಡಿ ನಿಯಮ ಉಲ್ಲಂಘನೆಗಾಗಿ ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಸರ್ಕಾರದ ನಿಯಂತ್ರಣದಡಿ ಡಿಜಿಟಲ್ ಮಾಧ್ಯಮ!
ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಲಿದೆ ಎಂದು ಮೂಲಗಳು ತಿಳಿಸಿದ್ದು, ಒಂದು ವೇಳೆ ಮಸೂದೆ ಅಂಗೀಕಾರವಾದಲ್ಲಿ ಭಾರತದಲ್ಲಿ ಪತ್ರಿಕೆಗಳು ಮತ್ತು ಮುದ್ರಣಾಲಯಗಳನ್ನು ನಿಯಂತ್ರಿಸುವ ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯಿದೆ 1867ಕ್ಕೆ ಬದಲಾವವಣೆ ಮಾಡಬೇಕಾಗುತ್ತದೆ.

ಅದರಿಂದ ಪತ್ರಿಕೆಗಳಿಗೆ ಸಮಾನವಾಗಿ ಡಿಜಿಟಲ್ ಮಾಧ್ಯಮವನ್ನು ತರಲು ಪ್ರಸ್ತಾಪಿಸುವ ಪತ್ರಿಕೆ ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆಯಡಿ, ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ನೋಂದಣಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಡಿಜಿಟಲ್ ಪ್ರಕಾಶಕರು ಪ್ರೆಸ್ ರಿಜಿಸ್ಟ್ರಾರ್ ಜನರಲ್ ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದರಿಂದ ಡಿಜಿಟಲ್ ಮಾಧ್ಯಮಗಳು ಸರ್ಕಾರದ ನಿಯಂತ್ರಣಕ್ಕೆ ಬರುತ್ತದೆ

ಪ್ರಸ್ತುತ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾದ ಪತ್ರಿಕೆಗಳ ರಿಜಿಸ್ಟ್ರಾರ್ (ಆರ್.ಎನ್.ಐ.), ದೇಶದಲ್ಲಿ ಪತ್ರಿಕೆಗಳ ಮುದ್ರಣ ಮತ್ತು ಪ್ರಕಟಣೆಗಳನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

2019ರಲ್ಲಿ ಕೇಂದ್ರ ಸರ್ಕಾರ ಪ್ರೆಸ್ ಮತ್ತು ನಿಯತಕಾಲಿಕೆಗಳ ಕರಡು ನೋಂದಣಿ ಮಸೂದೆ ಬಿಡುಗಡೆ ಮಾಡಿತ್ತು. ಅದು ಡಿಜಿಟಲ್ ಮಾಧ್ಯಮದಲ್ಲಿ ಸುದ್ದಿಗಳನ್ನು ಅಂತರ್ಜಾಲ, ಕಂಪ್ಯೂಟರ್ ಅಥವಾ ಮೊಬೈಲ್ ನೆಟ್ ವರ್ಕ್ ಗಳಲ್ಲಿ ಪ್ರಸಾರ ಮಾಡಬಹುದಾದ ಮತ್ತು ಪಠ್ಯ, ಆಡಿಯೋ, ವಿಡಿಯೋ ಮತ್ತು ಗ್ರಾಫಿಕ್ಸ್ ನ್ನು ಒಳಗೊಂಡಿರುವ ಡಿಜಿಟೈಸ್ಡ್ ರೂಪದಲ್ಲಿ ಸುದ್ದಿ ಎಂದು ವ್ಯಾಖ್ಯಾನಿಸಿತ್ತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!