Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಮಣಿಪಾಲ ಕೆಎಂಸಿಗೆ ಪ್ರಮಾಣಪತ್ರ

ಮಣಿಪಾಲ ಕೆಎಂಸಿಗೆ ಪ್ರಮಾಣಪತ್ರ

ಸುದ್ದಿಕಿರಣ ವರದಿ
ಶನಿವಾರ, ಜೂನ್ 18

ಮಣಿಪಾಲ ಕೆಎಂಸಿಗೆ ಪ್ರಮಾಣಪತ್ರ
ಮಣಿಪಾಲ: ಇಲ್ಲಿ ಕಸ್ತೂರ್ಬಾ ಆಸ್ಪತ್ರೆಗೆ ಸಿ.ಎಎಚ್.ಒ 3ಎಂ- ಸಿ.ಎಸ್.ಎಸ್.ಡಿ- ಎಸಿಇ ಪ್ರಮಾಣಪತ್ರ ಲಭಿಸಿದೆ.
ಆರೋಗ್ಯ ಸೇವೆಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ನಿರಂತರವಾಗಿ ಸುಧಾರಿಸುವ ಗುರಿಯೊಂದಿಗೆ ವಿವಿಧ ಆರೋಗ್ಯ ಸೌಲಭ್ಯಗಳೊಂದಿಗೆ ತೊಡಗಿಕೊಂಡಿರುವ ಲಾಭರಹಿತ ಮಾನ್ಯತಾ ಸಂಸ್ಥೆ ಹೆಲ್ತ್ ಕೇರ್ ಸಂಸ್ಥೆಗಳ ಒಕ್ಕೂಟ ಗುಣಮಟ್ಟದ ಸುಧಾರಣೆಯ ಉಪಕ್ರಮವಾಗಿ ಜಾಗೃತಿ ಶ್ರೇಷ್ಠತೆ ಅನುಸರಣೆ ಜಾಗೃತಿ ಕಾರ್ಯಕ್ರಮ ಪ್ರಾರಂಭಿಸಿದ್ದು, ಈ ಉಪಕ್ರಮದಲ್ಲಿ ತಾಂತ್ರಿಕ ಮಾರ್ಗದರ್ಶನ ಪಾಲುದಾರರಾಗಿ 3ಎಂ ಭಾರತ ಕಾರ್ಯನಿರ್ವಹಿಸುತ್ತಿದೆ.

ಮಾಹೆ ಮಣಿಪಾಲ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಸಹ ಉಪಕುಲಪತಿ (ಆರೋಗ್ಯ ಮತ್ತು ದಂತ ವಿಜ್ಞಾನ) ಡಾ. ಪಿ.ಎಲ್.ಎನ್.ಜಿ. ರಾವ್ ಅವರು ಜಂಟಿಯಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಆಸ್ಪತ್ರೆಯ ಸೋಂಕು ನಿಯಂತ್ರಣ ಸಮಿತಿ ಮುಖ್ಯಸ್ಥ ಡಾ. ಮುರಳೀಧರ ವರ್ಮ ಮತ್ತು ಗುಣಮಟ್ಟ ಅನುಷ್ಠಾನ ಸಲಹೆಗಾರ ಡಾ ಸುನಿಲ್ ಸಿ. ಮುಂಡ್ಕೂರ್ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿ ಸಮಗ್ರ ತಂಡವನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಹೆ ಮಣಿಪಾಲ ಸಹ ಉಪ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ವೆಂಕಟ್ರಾಯ ಪ್ರಭು, ಕಸ್ತೂರ್ಬಾ ಆಸ್ಪತ್ರೆಯ ಸಿಒಒ ಸಿ.ಜಿ.ಮುತ್ತಣ್ಣ, ಸಿಎಸ್.ಎಸ್.ಡಿ ಸಿಬ್ಬಂದಿ ಮತ್ತು ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿಗಳು ಇದ್ದರು.

ಮಣಿಪಾಲ ಕೆಎಂಸಿ ಆಸ್ಪತ್ರೆ 3ಎಂ ಸಿಎಎಚ್.ಒ- ಸಿ.ಎಸ್.ಎಸ್.ಡಿ- ಎಸಿಇ ಪ್ರಮಾಣಪತ್ರ ಪಡೆದ ಅತೀ ದೊಡ್ಡ ಬೋಧನಾ ಆಸ್ಪತ್ರೆಯಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!