ಉಡುಪಿ: ಭಾರತೀಯ ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ಆಶ್ರಯದಲ್ಲಿ ಉಡುಪಿ ನಗರ ಪೋಲಿಸ್ ಠಾಣೆ ಮಾರ್ಗದರ್ಶನದಲ್ಲಿ ಬ್ರಹ್ಮಾವರ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ನೈನಾ ಫ್ಯಾನ್ಸಿ ಸಹಯೋಗದೊಂದಿಗೆ ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಕೋವಿಡ್ ವಾರ್ ರೂಮಿನಲ್ಲಿರುವ ನಿರಾಶ್ರಿತರಿಗೆ ಅಗತ್ಯ ಪರಿಕರಗಳಾದ ಬೆಡ್ ಶೀಟ್, ಮಾಸ್ಕ್ ಮತ್ತು ಸೋಪು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಗೌರವ ಖಚಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಡಿ.ಡಿ.ಆರ್.ಸಿ ಸದಸ್ಯ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ, ಡಿ.ಡಿ.ಆರ್.ಸಿ ಸಿಬ್ಬಂದಿ ಅನುಷಾ ಆಚಾರ್ಯ, ರೆಡ್ ಕ್ರಾಸ್ ಸದಸ್ಯ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ನೈನಾ ಫ್ಯಾನ್ಸಿ ಸೆಂಟರ್ ಮಾಲೀಕ ಮಹಮ್ಮದ್ ಮೌಲಾ, ಉಡುಪಿ ಆರಕ್ಷಕ ಠಾಣಾಧಿಕಾರಿ ವಾಸಪ್ಪ ನಾಯಕ್, ಸಿಬ್ಬಂದಿ ಮತ್ತು ಅನ್ಸಾರ್ ಅಹಮದ್ ಇದ್ದರು.