Saturday, July 2, 2022
Home ಸಮಾಚಾರ ಸಂಘಸಂಗತಿ `ಅನಾವರಣ' ಪುಸ್ತಕ ಬಿಡುಗಡೆ

`ಅನಾವರಣ’ ಪುಸ್ತಕ ಬಿಡುಗಡೆ

ಉಡುಪಿ: ಈಚಿನ ದಿನಗಳಲ್ಲಿ ಬರೆಯುವ ಮನೋಭಾವನೆ ಕಡಿಮೆಯಾಗುತ್ತಿದೆ. ಇದು ಸರಿಯಲ್ಲ. ಬರೆಯುವಿಕೆ ಮತ್ತು ಓದುವಿಕೆ ಮನುಷ್ಯನನ್ನು ಒತ್ತಡಗಳಿಂದ ದೂರ ಮಾಡಬಲ್ಲದು ಎಂದು ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.

ಜೇಸಿಐ ಪರ್ಕಳ ಆಶ್ರಯದಲ್ಲಿ ಯುವ ಬರಹಗಾರ ಬಡಗಬೆಟ್ಟು ಸೊಸೈಟಿ ಶಾಖಾ ವ್ಯವಸ್ಥಾಪಕ ನವೀನ್ ಕೆ. ಶೆಟ್ಟಿಬೆಟ್ಟು ಬರೆದ `ಅನಾವರಣ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಮೊಬೈಲ್, ಸಾಮಾಜಿಕ ಜಾಲತಾಣ ಪರಿಣಾಮವಾಗಿ ಪುಸ್ತಕಗಳು ಹೊರಬರುತ್ತಿರುವುದು ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಯುವಜನಾಂಗ ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ತೋರುತ್ತಿರುವುದು ಸಂತಸದಾಯಕ ಎಂದರು.

ಮಂಗಳೂರು ಸರ್ಕಾರಿ ಪ್ರ. ದ. ಕಾಲೇಜು ಪ್ರಾಧ್ಯಾಪಕ ಡಾ| ನವೀನ್ ಕೊಣಾಜೆ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯ ಪ್ರೀತಿಗೆ ಗೋಡೆ ಪತ್ರಿಕೆಗಳು ಉತ್ತಮ ವೇದಿಕೆಗಳಾಗಿವೆ. ಅದನ್ನು ಬಳಸಿಕೊಂಡು ಕೃತಿಕಾರರು ಒಳ್ಳೆಯ ಕೃತಿ ತರಲು ಪ್ರೇರಣೆಯಾಗಿದೆ. ಜೊತೆಗೆ ಅಧ್ಯಾಪಕರ ಮಾರ್ಗದರ್ಶನ ಕೂಡಾ ಅಗತ್ಯ ಎಂದರು.

ಅಭ್ಯಾಗತರಾಗಿದ್ದ ವಕೀಲ, ಸಾಹಿತಿ ಸುಹಾನ್ ಸಾಸ್ತಾನ, ಕೃತಿ ಪ್ರಸ್ತುತ ಸಮಾಜಕ್ಕೆ ಹತ್ತಿರವಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ನಮ್ಮ ಗೆಳೆಯರ ಬಳಗ ಬೇರೆ ಬೇರೆ ಕಡೆ ಪ್ರವಾಸಕ್ಕೆ ತೆರಳುವ ಸಂದರ್ಭ ಅಲ್ಲಿ ನೋಡಿದ ಸನ್ನಿವೇಶಗಳ ಬಗ್ಗೆಯೂ ಕೃತಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಯುವ ಜನಾಂಗಕ್ಕೆ ಕವನ ರಚನಾ ಕಮ್ಮಟ ನಡೆಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಘಟಕಾಧ್ಯಕ್ಷ ಮನೋಜ್ ಪ್ರಭು ಶುಭ ಹಾರೈಸಿದರು. ರಂಗಕರ್ಮಿ ಬಾಸುಮ ಕೊಡಗು ಕೃತಿ ಪರಿಚಯ ಮಾಡಿದರು. ಮೊಗವೀರ ಯುವಸಂಘ ಹಿರಿಯಡಕ ಅಧ್ಯಕ್ಷ ವಿಜಯ ಮೆಂಡನ್, ಕಾರ್ಯದರ್ಶಿ ಉಷಾ ಜೆ. ಕಲ್ಮಾಡಿ, ದೀಪಿಕಾ, ಇಂಚರ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಪುರಸ್ಕಾರವನ್ನು ಮೆಸ್ಕಾಂ ಲೈನ್ ಮ್ಯಾನ್ ರಾಜೇಶ್ ಅಮೀನ್ ಅವರಿಗೆ ನೀಡಲಾಯಿತು

ಕೃತಿಕಾರ ನವೀನ್ ಕೆ. ಶೆಟ್ಟಿಬೆಟ್ಟು ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ನಿರೂಪಿಸಿದರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!