ಕಲಾವಿದರ ಕುಟುಂಬಗಳಿಗೆ ಸಹಾಯ ಹಸ್ತ
(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಯು. ವಿಶ್ವನಾಥ ಶೆಣೈ ಮತ್ತವರ ಧರ್ಮಪತ್ನಿ ಪ್ರಭಾವತಿ ಶೆಣೈ 40 ಸಾವಿರ ರೂ. ಮೊತ್ತದ ಸಹಾಯ ಹಸ್ತವನ್ನು ಕಲಾವಿದರ ಕುಟುಂಬ ಹಾಗೂ ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಶಂಕರ್, ಉಪಾಧ್ಯಕ್ಷರಾದ ಮರವಂತೆ ನಾಗರಾಜ್ ಹೆಬ್ಬಾರ್, ಸಂಧ್ಯಾ ಶೆಣೈ, ಸದಸ್ಯ ನರಸಿಂಹಮೂರ್ತಿ, ಸಂಚಾಲಕ ರವಿರಾಜ್ ಎಚ್. ಪಿ. ಮೊದಲಾದವರಿದ್ದರು.