Thursday, July 7, 2022
Home ಸಮಾಚಾರ ಸಂಘಸಂಗತಿ ಗಾಲಿಕುರ್ಚಿ ಕೊಡುಗೆ

ಗಾಲಿಕುರ್ಚಿ ಕೊಡುಗೆ

ಗಾಲಿಕುರ್ಚಿ ಕೊಡುಗೆ

(ಸುದ್ದಿಕಿರಣ ವರದಿ)
ಉಡುಪಿ: ರೈಲು ಅಪಘಾತದಿಂದ ಎರಡೂ ಕಾಲು ಕಳೆದುಕೊಂಡು ಅಸಹಾಯಕ ಪರಿಸ್ಥಿತಿಯಲ್ಲಿದ್ದ ಬಾಬೀ ರಾಮ್ ಬಾಬು ಅವರಿಗೆ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಸಂಸ್ಥೆ ಉಚಿತವಾಗಿ ಗಾಲಿ ಕುರ್ಚಿ ನೀಡಿ ಮಾನವೀಯತೆ ಮೆರೆದರು.

ಸಂಸ್ಥೆ ಮಾಲಕ ರವೀಂದ್ರ ಶೆಟ್ಟಿ, ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು, ರಮೇಶ್ ಕಿದಿಯೂರ್, ತಾರಾನಾಥ್ ಮೇಸ್ತ ಶಿರೂರು ಇದ್ದರು.

ಫಲಾನುಭವಿ ಬಾಬು ಅವರು ಉದ್ಯಾವರ ಕಟ್ಟೆಗುಡ್ಡೆ ವಸತಿ ಸಂಕೀರ್ಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದರು.

ತನ್ನ ಅಸಹಾಯಕತೆಯನ್ನು ಜಿಲ್ಲಾ ನಾಗರಿಕ ಸಮಿತಿಯಲ್ಲಿ ಹೇಳಿಕೊಂಡು ಗಾಲಿಕುರ್ಚಿ ಹಾಗೂ ಕೃತಕ ಕಾಲು ಜೋಡಿಸುವಂತೆ ನೆರವು ಯಾಚಿಸಿದ್ದರು.

ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯವರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಕ್ಷಣ ಸಂಸ್ಥೆಯವರು ಸ್ಪಂದಿಸಿದರು.

ಕೃತಕ ಕಾಲು ಜೋಡಣೆಗೆ ದುಬಾರಿ ವೆಚ್ಚ ಬರಲಿದ್ದು, ಆರ್ಥಿಕ ಕ್ರೋಢೀಕರಣ ನಡೆಯುತ್ತಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!