Thursday, July 7, 2022
Home ಸಮಾಚಾರ ಸಂಘಸಂಗತಿ ಟಾರ್ಪಲ್ ಕೊಡುಗೆ

ಟಾರ್ಪಲ್ ಕೊಡುಗೆ

ಉಡುಪಿ: ಭಾರೀ ಗಾಳಿ ಮಳೆಗೆ ಬೆಳ್ಮಣ್ ನಂದಳಿಕೆಯ ದುಗುಣಿ ಎಂಬವರ ಮನೆಯ ಮಾಡು ಹಾರಿ ಹೋಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರವಾಗಿ ಭಾರತೀಯ ರೆಡ್ ಕ್ರಾಸ್ ಉಡುಪಿ ಘಟಕ ವತಿಯಿಂದ 2 ಟಾರ್ಪಲ್ ಹಾಗೂ ಕಿಚನ್ ಸೆಟ್ ನ್ನು ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಮತ್ತು ಲಯನ್ಸ್ ಜಿಲ್ಲಾ ಗವರ್ನರ್ ನೀಲಕಂಠ ಎಂ. ಹೆಗಡೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ತಂತ್ರಿ, ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಡಿಡಿಆರ್.ಸಿ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ, ಡಿಡಿ ಆರ್.ಸಿ ಸಿಬ್ಬಂದಿ ಅನುಷಾ ಆಚಾರ್ಯ, ರವಿರಾಜ್ ನಾಯಕ್, ಬೆಳ್ಮಣ್ ಗ್ರಾ. ಪಂ. ಪಿ.ಡಿ.ಒ. ಪ್ರಕಾಶ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!