Thursday, July 7, 2022
Home ಸಮಾಚಾರ ಸಂಘಸಂಗತಿ ಟೈಲರ್ ಗಳಿಗೆ ಕಿಟ್ ವಿತರಣೆ

ಟೈಲರ್ ಗಳಿಗೆ ಕಿಟ್ ವಿತರಣೆ

ಉಡುಪಿ: ಇಲ್ಲಿಗೆ ಸಮೀಪದ ಉದ್ಯಾವರ ಶಂಭುಶೈಲೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಲರ್ಸ್ ಅಸೋಸಿಯೇಶನ್ ಸದಸ್ಯರಿಗೆ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ತನ್ನ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅಕ್ಕಿ ಹಾಗೂ ಆಹಾರ ಪದಾರ್ಥಗಳ ಕಿಟ್ ನೀಡಿದರು.

ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪರಸ್ಪರ ಸಹಕಾರ ಮನೋಭಾವನೆಯೊಂದಿಗೆ ಸಮಾಜದೊಂದಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್, ಕಳೆದ ಕೊರೊನಾ 1ನೇ ಅಲೆ ಸಂದರ್ಭದಲ್ಲಿಯೂ ಆಹಾರದ ಕಿಟ್ ಜೊತೆಗೆ ಪ್ರತಿದಿನ ಊಟ ನೀಡುವ ವ್ಯವಸ್ಥೆ ಮಾಡಿತ್ತು. 2ನೇ ಅಲೆಯ ಸಂದರ್ಭದಲ್ಲಿಯೂ ಆಕ್ಸಿಮೀಟರ್, ಫೇಸ್ ಮಾಸ್ಕ್ ಮುಂತಾದ ಸೌಲಭ್ಯ ಒದಗಿಸುವ ಜೊತೆಗೆ ಅಪೇಕ್ಷೆ ಪಟ್ಟ ಸಂಘಸಂಸ್ಥೆಗಳಿಗೆ ಕಿಟ್ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.

ಲಾಕ್ ಡೌನ್ ಕೊನೆಗೊಳಿಸಲಾಗಿದ್ದರೂ ಕೊರೊನಾ ನಿಯಂತ್ರಣದ ನಿಯಮ ಪಾಲಿಸುತ್ತಾ ನಮ್ಮ ವ್ಯಾವಹಾರಿಕ ಬದುಕಿನ ಜೊತೆಗೆ 3ನೇ ಅಲೆ ಬಾರದ ರೀತಿಯಲ್ಲಿ ನಮ್ಮ ಪಾಲಿನ ಕರ್ತವ್ಯವನ್ನು ಪ್ರತಿಯೊಬ್ಬರು ನಿರ್ವಹಿಸಬೇಕು ಎಂದವರು ಕಿವಿಮಾತು ಹೇಳಿದರು.

ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ವಲಯ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಉದ್ಯಾವರ ಗ್ರಾ. ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಹಾಗೂ ಗ್ರಾ. ಪಂ. ಮಾಜಿ ಅಧ್ಯಕ್ಷ ವಿಜಯ್ ಕುಮಾರ್ ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಟಸ್ಟಿನ ಸಾಮಾಜಿಕ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾ. ಪಂ. ಸದಸ್ಯ ರಮಾನಂದ, ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ, ವಲಯ ಮಾಜಿ ಅಧ್ಯಕ್ಷ ರಾಘವೇಂದ್ರ ಗಾಣಿಗ, ಸುರೇಶ್ ಪಾಲನ್ ಮತ್ತು ಸುರೇಶ್ ಪೂಜಾರಿ ಉದ್ಯಾವರ, ಗಿರಿಜ ಹೆಲ್ತ್ ಕೇರ್ ಸಂಚಾಲಕ ರವೀಂದ್ರ ಶೆಟ್ಟಿ ಕಡೆಕಾರು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!