Monday, July 4, 2022
Home ಸಮಾಚಾರ ಸಂಘಸಂಗತಿ ಪ್ರಥಮ ಚಿಕಿತ್ಸೆ ತರಬೇತಿ

ಪ್ರಥಮ ಚಿಕಿತ್ಸೆ ತರಬೇತಿ

ಉಡುಪಿ: ಭಾರತೀಯ ರೆಡ್ ಕ್ರಾಸ್ ಉಡುಪಿ ಹಾಗೂ ಪೊಲೀಸ್ ತರಬೇತಿ ಶಾಲೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಚಂದು ಮೈದಾನ ಸಭಾಭವನದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ನಡೆಯಿತು.

ಅಭ್ಯಾಗತರಾಗಿದ್ದ ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ನಿತ್ಯ ಜೀವನದಲ್ಲಿ ಪ್ರಥಮ ಚಿಕಿತ್ಸೆ ಎಲ್ಲರಿಗೂ, ಅದರಲ್ಲೂ ಪೊಲೀಸರಿಗೆ ಅತ್ಯಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿ.ವೈ.ಎಸ್.ಪಿ ರಾಘವೇಂದ್ರ, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಎಲ್ಲರಿಗೂ ಈ ತರಬೇತಿ ಹಮ್ಮಿಕೊಳ್ಳಲು ಸಲಹೆ ನೀಡಿದರು.

ತರಬೇತುದಾರರಾಗಿ ಅಶ್ವಿನ್ ಕುಮಾರ್, ಗೌತಮ್ ಹಾಗೂ ಗ್ಲೋರಿಯಾ ಸಹಕರಿಸಿದರು.

ಭಾರತೀಯ ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಪೊಲೀಸ್ ತರಬೇತಿ ಶಿಕ್ಷಕ ಬಾಲಸುಬ್ರಹ್ಮಣ್ಯಂ ಇದ್ದರು.

ರೆಡ್ ಕ್ರಾಸ್ ಸಂಸ್ಥೆಯ ಅನುಷಾ ಹಾಗೂ ಸುನೀತಾ ಸಹಕರಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!