Thursday, July 7, 2022
Home ಸಮಾಚಾರ ಸಂಘಸಂಗತಿ ಕೊರಗ ಕುಟುಂಬಕ್ಕೆ ಮನೆ ಹಸ್ತಾಂತರ

ಕೊರಗ ಕುಟುಂಬಕ್ಕೆ ಮನೆ ಹಸ್ತಾಂತರ

ಉಡುಪಿ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಬಡ ಕೊರಗ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಡಾ. ತಾಹ ಮತೀನ್, ಫಲಾನುಭವಿ ಲತಾ ಅವರಿಗೆ ಕೀಲಿಕೈ ಹಸ್ತಾಂತರಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಮಗಾಗಿ ನಾವು ಸುಂದರ ಮನೆ ಕಟ್ಟುವಾಗ ಮನೆ ಇಲ್ಲದವರಿಗೂ ಸುಂದರ ಮನೆ ಇರಲಿ ಎಂದು ಬಯಸುವುದು ನಿಜಕ್ಕೂ ಮಾದರಿ ಕಾರ್ಯ. ತಮ್ಮ ತಮ್ಮ ಜಾತಿ, ಸಮುದಾಯದವರಿಗೆ ಮಾತ್ರ ಸಹಕಾರ ನೀಡುತ್ತಿರುವ ಈ ದಿನಗಳಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಾತಿ, ಧರ್ಮ ಮೀರಿ ಸಹಾಯ ಮಾಡುತ್ತಿರುವುದು ಸಂತಸದಾಯಕ ವಿಚಾರ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಡಾ. ತಾಹ ಮತೀನ್, ಹೂಡೆ ಪರಿಸರದಲ್ಲಿ ಎಲ್ಲ ಧರ್ಮೀಯರೂ ಪರಸ್ಪರ ಸಹಕಾರದಿಂದ ಬಾಳುತ್ತಿರುವುದು ಸಂತಸದಾಯಕ ಎಂದರು.

ದಸಂಸ ಮುಖಂಡ ಸುಂದರ ಮಾಸ್ತರ್, ಪ್ರೊ. ಡಾ. ಅಬ್ದುಲ್ ಅಜೀಝ್ ಶುಭ ಹಾರೈಸಿದರು. ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಅಬ್ದುಲ್ ಕಾದಿರ್ ಅಧ್ಯಕ್ಷತೆ ವಹಿಸಿದ್ದರು. ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ದಲಿತ ದಮನಿತರ ಹೋರಾಟ ಸಮಿತಿ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, ದಿನಕರ ಬೆಂಗ್ರೆ, ಪಂಚಾಯತ್ ಅಧ್ಯಕ್ಷೆ ಲತಾ, ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಗ್ರಾ. ಪಂ. ಸದಸ್ಯೆ ಸಂಧ್ಯಾ, ವಿಜಯ, ಮಮ್ತಾಝ್, ಸುಝಾನ್, ಕುಸುಮ, ವತ್ಸಲ, ಉಸ್ತಾದ್ ಹೈದರ್, ಡಾ. ಫಹೀಮ್, ತೋನ್ಸೆ ಪಂಚಾಯತ್ ಮಾಜಿ ಅಧ್ಯಕ್ಷೆ ಫೌಝೀಯಾ ಸಾದಿಕ್, ಉಸ್ತಾದ್ ಸಾದೀಕ್, ಎಸ್.ಐ.ಓ. ಹೂಡೆ ಘಟಕಾಧ್ಯಕ್ಷ ವಸೀಮ್, ಎಚ್.ಆರ್.ಎಸ್.ನ ಹಸನ್ ಕೋಡಿಬೆಂಗ್ರೆ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!