Monday, July 4, 2022
Home ಸಮಾಚಾರ ಸಂಘಸಂಗತಿ ವಿಶೇಷ ಚೇತನರಿಗೆ ಆದ್ಯತೆ

ವಿಶೇಷ ಚೇತನರಿಗೆ ಆದ್ಯತೆ

ಉಡುಪಿ: ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಜಿಲ್ಲಾ ವಿಶೇಷ ಚೇತನರ ಪುನರ್ವಸತಿ ಕೇಂದ್ರ, ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ವಿಶೇಷ ಚೇತನರಿಗೆ ಆದ್ಯತೆ ನೀಡಿ ಸೌಲಭ್ಯ ಕಲ್ಪಿಸಲಿದೆ ಎಂದು ರೆಡ್ ಕ್ರಾಸ್ ಜಿಲ್ಲಾ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಕೇಂದ್ರದಲ್ಲಿ ಸಿದ್ಧಪಡಿಸಲಾದ ಕೃತಕ ಅವಯವಗಳನ್ನು ಫಲಾನುಭವಿಗೆ ವಿತರಿಸಿ, ಅಭ್ಯಾಸ ಮಾಡುವಂತೆ ಸಲಹೆ ನೀಡಿದರು.

ಕೇಂದ್ರದಲ್ಲಿ 10 ಮಂದಿಯ ತಂಡವಿದ್ದು ಫಿಸಿಯೋಥೆರಪಿ, ಮಾತಿನ ತರಬೇತಿ, ದೈನಂದಿನ ಚಟುವಟಿಕೆ ತರಬೇತಿ ಮುಂತಾದ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ವಿವಿಧ ಮೂಲಗಳಿಂದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ಕೃತಕ ಕೈ ಮತ್ತು ಕಾಲು, ಕ್ಯಾಲಿಪರ್ಸ್ ಮುಂತಾದ ಕೃತಕ ಅವಯವಗಳನ್ನು ಕೇಂದ್ರದಲ್ಲೇ ಸಿದ್ಧಪಡಿಸಿ ವಿತರಿಸಲಾಗುತ್ತಿದೆ ಎಂದರು.

ರೆಡ್ ಕ್ರಾಸ್ ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಕೇಂದ್ರದ ನೋಡಲ್ ಅಧಿಕಾರಿ ಪಿ. ವಿ. ಸುಬ್ರಮಣಿ, ಇಂಜಿನಿಯರ್ ವಿಕ್ಕಿ ಕುಮಾರ್, ರೆಡ್ ಕ್ರಾಸ್ ಹಾಗೂ ಡಿ.ಡಿ.ಆರ್.ಸಿ. ಸಿಬಂದಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!