ಉಡುಪಿ: ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಕೊರೊನಾ ದಿನಗಳಲ್ಲಿ ಸಮಾಜಸೇವೆಯಲ್ಲಿ ತೊಡಗಿದೆ. ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಹುಟ್ಟುಹಬ್ಬ ಪ್ರಯುಕ್ತ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚುತ್ತಾ ಅಳಿಲುಸೇವೆ ಸಲ್ಲಿಸಿದೆ.
ಜಿಲ್ಲೆಯಾದ್ಯಂತ ಅನ್ನದಾನ, ತರಕಾರಿ ಕಿಟ್ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಮತ್ತು ಕೋವಿಡ್ ಲಸಿಕೆ ಜಾಗೃತಿ ಕಾರ್ಯಕ್ರಮ ಕಳೆದ ಒಂದು ವಾರದಿಂದ ನಡೆಯುತ್ತಿದೆ.
ಮಲ್ಪೆ ಪೊಲೀಸ್ ಠಾಣೆ ಅಧಿಕಾರಿಗಳು, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ಹಲವು ಸದಸ್ಯರು, ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣಗುಡ್ಡೆ ಸದಸ್ಯರು, ಉಡುಪಿ ನಗರಸಭೆ ಕಾರ್ಯಕರ್ತರಿಗೆ, ಪರ್ಕಳ ವಾರ್ಡಿನ ಹಲವಾರು ಕಡೆಗಳಲ್ಲಿ, ಅನಾಥ ಆಶ್ರಮಗಳಿಗೆ ಹೀಗೆ ಹತ್ತು ಹಲವು ಕಾರ್ಯಕ್ರಮ ಆಯೋಜಿಸುವ ಮೂಲಕ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ ಕೊಡವೂರು, ಉಮಾ ಎಸ್. ಚಿಕ್ಕಮಠ, ಸವಿತಾ ನೋಟಗಾರ, ಈರಪ್ಪ ಗೌಂಡಿ, ಬಸವರಾಜ್ ಐಹೊಳೆ, ಮಹೇಶ್ ಗುಂಡಿಬೈಲ್, ರಮೇಶ್ ಎಂಜಿಎಂ, ಶರಣಪ್ಪ ಬಾರ್ಕೇರ್, ಅಯಾಜ್, ಹನುಮಂತರಾಯ ಪೂಜಾರ್, ಶಿವರಾಜ್ ಗುಂಜಿ, ಗೋಪಾಲ, ಕಾಶಿನಾಥ್, ಮಂಜುನಾಥ್ ಬೋವಿ, ಹನುಮಂತ ಮುದ್ದಳ್ಳಿ ಮೊದಲಾದವರಿದ್ದರು