Saturday, July 2, 2022
Home ಸಮಾಚಾರ ಸಂಘಸಂಗತಿ ಸಸ್ಯರಕ್ಷಾ ಅಭಿಯಾನಕ್ಕೆ ಚಾಲನೆ

ಸಸ್ಯರಕ್ಷಾ ಅಭಿಯಾನಕ್ಕೆ ಚಾಲನೆ

ಉಡುಪಿ: ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಪರ್ಯಾವರಣ ಸಂರಕ್ಷಣಾ ಗತಿವಿಧಿ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳಿಗೆ ನೀರುಣಿಸುವ ಸಸ್ಯರಕ್ಷಾ ಅಭಿಯಾನಕ್ಕೆನಗರಸಭಾ ಮಾಜಿ ಸದಸ್ಯ ಶ್ಯಾಮಪ್ರಸಾದ್ ಕುಡ್ವ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕ ಬಳಿ ಶನಿವಾರ ಚಾಲನೆ ನೀಡಿದರು.

ಸಸ್ಯರಕ್ಷಾ ಅಭಿಯಾನ ಪ್ರಸ್ತುತ ಕಾಲಘಟ್ಟದಲ್ಲಿ ತೀರಾ ಅಗತ್ಯವಾಗಿದೆ. ಬೇಸಿಗೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಗಿಡಮರಗಳಿಗೆ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆಯಿಲ್ಲದೆ ಅವುಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಗಿಡಮರಗಳ ಸಂಖ್ಯೆ ಹೆಚ್ಚಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಿಡಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿಯಾದರೆ ಮಾತ್ರ ಅದು ನಿಜವಾದ ಅಭಿವೃದ್ಧಿ. ಹಸಿರು ಪದರ ಹೆಚ್ಚಿಸಿದರೆ ಅದರಿಂದ ದೀರ್ಘಕಾಲಿಕ ಪ್ರಯೋಜನಗಳಿವೆ ಎಂದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್ ಅಭಿಯಾನದ ಬಗ್ಗೆ ಮಾತನಾಡಿ, ನೀರಿನ ಬಾಟಲ್ ಗಳನ್ನು ಎಸೆಯುವ ಬದಲು ಸಾರ್ವಜನಿಕ ಸ್ಥಳಗಳಲ್ಲಿರುವ ಗಿಡಗಳಿಗೆ ನೀರುಣಿಸಲು ಉಪಯೋಗಿಸಬಹುದು. ಬಾಟಲ್ ಗಳಲ್ಲಿ ಸಣ್ಣದೊಂದು ರಂಧ್ರ ಕೊರೆದು ಗಿಡಕ್ಕೆ ಕಟ್ಟಿದಲ್ಲಿ ಹನಿಹನಿಯಾಗಿ ಗಿಡದ ಬುಡಕ್ಕೆ ನೀರು ಬೀಳುತ್ತದೆ. ಪ್ರತಿನಿತ್ಯ ನೀರು ತುಂಬಿಸುವ ಕೆಲಸ ಆಗಬೇಕು. ಇದರಿಂದ ತೇವಾಂಶವೂ ಅಲ್ಲಿ ಉಳಿಯುವ ಮೂಲಕ ಗಿಡಗಳ ಬೆಳವಣಿಗೆಗೆ ಪೂರಕವಾಗುತ್ತದೆ. ಸ್ವಇಚ್ಛೆಯಿಂದ ಪರಿಸರ ಪ್ರೇಮಿಗಳು ಈ ಅಭಿಯಾನದಲ್ಲಿ ಕೈಜೋಡಿಸಬಹುದು ಎಂದರು.

ಪರ್ಯಾವರಣ ಸಂರಕ್ಷಣಾ ಗತಿವಿಧಿ ಜಿಲ್ಲಾ ಸಂಯೋಜಕ ತೋನ್ಸೆ ಗಣೇಶ್ ಶೆಣೈ, ವಕೀಲ ರಫೀಕ್ ಖಾನ್, ಜಗದೀಶ್ ಶೆಟ್ಟಿ, ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಉದಯ ನಾಯ್ಕ್, ಮಾಜಿ ಸೈನಿಕ ವಾದಿರಾಜ್ ಹೆಗ್ಡೆ, ಸದಾಶಿವ ಬೈಲೂರು, ನರಹರಿ ನಾಯಕ್ ಮೊದಲಾದವರಿದ್ದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!