ಉಡುಪಿ: ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಉಡುಪಿ ವಿಭಾಗ ವತಿಯಿಂದ ಇಲ್ಲಿನ ಪ್ರೆಸ್ ಕ್ಲಬ್ ಸದಸ್ಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗುರುವಾರ ಹಸ್ತಾಂತರಿಸಲಾಯಿತು.
ವಿಭಾಗೀಯ ವ್ಯವಸ್ಥಾಪಕ ಮಂಜುನಾಥ ಐ. ಎಂ. ಅವರು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅವರಿಗೆ ಹಸ್ತಾಂತರಿಸಿದರು.
ಏರಿಯಾ ಮೆನೇಜರ್ ಪ್ರದೀಪ್ ಕುಮಾರ್ ಬಿ. ಎಸ್., ಶಾಖಾ ವ್ಯವಸ್ಥಾಪಕ ರಘು ಎಸ್. ಮತ್ತು ಪತ್ರಕರ್ತ ದೀಪಕ್ ಜೈನ್ ಇದ್ದರು.