ಉಡುಪಿ: ದೇಶದ ಆರ್ಥಿಕ ಸ್ಥಿತಿಗತಿ ಬಲಪಡಿಸುವಲ್ಲಿ ತಮ್ಮದೇ ಆದ ಪ್ರಧಾನ ಪಾತ್ರ ವಹಿಸುತ್ತಿರುವ ಚಾರ್ಟರ್ಡ್ ಅಕೌಂಟೆಂಟ್ಸ್ ರಾಷ್ಟ್ರೀಯ ದಿನಾಚರಣೆಯನ್ನು ಉಡುಪಿಯ ಪ್ರತಿಷ್ಟಿತ ಮೆ| ದೇವ್ ಆನಂದ್ ಆ್ಯಂಡ್ ಕಂ.ಯ ಪಾಲುದಾರೆ ಸಿಎ ರೇಖಾ ದೇವಾನಂದ್ ಅವರನ್ನು ಅವರ ಸ್ವಗೃಹದಲ್ಲಿ ಉಡುಪಿ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರು ಸನ್ಮಾನಿಸಿದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ಶುಭಾ ಎಸ್. ಬಾಸ್ರಿ ಸನ್ಮಾನಿಸಿದರು.
ಕಾರ್ಯದರ್ಶಿ ಶಾಲಿನಿ ರಾಘವೇಂದ್ರ ವಂದಿಸಿದರು.
ನಿಕಟ ಪೂರ್ವ ಅಧ್ಯಕ್ಷೆ ಮಾಲತಿ ತಂತ್ರಿ ಹಾಗೂ ಪದಾಧಿಕಾರಿಗಳಾದ ಸುರೇಖ ಕಲ್ಕೂರ್ ಮತ್ತು ಶೈಲಾ ಮಯ್ಯ ಇದ್ದರು.