Thursday, July 7, 2022
Home ಸಮಾಚಾರ ಸಂಘಸಂಗತಿ ಕೃಷ್ಣಾನುಗ್ರಹ ದತ್ತುಸಂಸ್ಥೆಗೆ ಕೊಡುಗೆ

ಕೃಷ್ಣಾನುಗ್ರಹ ದತ್ತುಸಂಸ್ಥೆಗೆ ಕೊಡುಗೆ

ಉಡುಪಿ: ಇಲ್ಲಿನ ಸಂತೆಕಟ್ಟೆ ಶ್ರೀಕೃಷ್ಣಾನುಗ್ರಹ ದತ್ತುಸಂಸ್ಥೆಯ ಕೆಲವು ಮಕ್ಕಳಿಗೆ ಕೊರೊನಾ ಸೋಂಕು ತಗುಲಿ ಸಮಸ್ಯೆಯಾದಾಗ ಚೈಲ್ಡ್ ಲೈನ್, ರೋಟರಿ ಉಡುಪಿ ಮತ್ತು ಶ್ರೀಕೃಷ್ಣ ರೋಟರಾಕ್ಟ್ ಕ್ಲಬ್ ಗಳು ಸಂಸ್ಥೆಗೆ ಅವಶ್ಯ ವಸ್ತುಗಳನ್ನು ನೀಡಿ ಸಹಕರಿಸಿದ್ದು, ಇದೀಗ ಮಕ್ಕಳು ಗುಣಮುಖರಾಗಿದ್ದು ಅವರ ಶಿಕ್ಷಣಕ್ಕೆ ಸಹಕಾರಿಯಾಗುವಂತೆ ಬೆಂಚು ಮತ್ತು ಡೆಸ್ಕ್ ನೀಡಲಾಯಿತು.

ಈ ಸಂದರ್ಭದಲ್ಲಿ ತರಗತಿಯನ್ನು ಉಡುಪಿ ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಉದ್ಘಾಟಿಸಿದರು.

ತರಗತಿಗೆ ಉಪಯುಕ್ತವಾದ ಬೆಂಚ್, ಡೆಸ್ಕ್, ತೊಟ್ಟಿಲ ಹಾಸಿಗೆ ಉಪಕರಣ ನೀಡಿದ ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಟರಿ ಉಡುಪಿ ತನ್ನ ಕೊಡುಗೆ ನೀಡಿದೆ ಎಂದರು.

ಶ್ರೀಕೃಷ್ಣ ರೋಟರಾಕ್ಟ್ ಅಧ್ಯಕ್ಷೆ ಶೃತಿ ಶೆಣೈ, ಮಕ್ಕಳಿಗೆ ಉಪಯುಕ್ತವಾದ ಬೆಡ್ ಶೀಟ್ ಮತ್ತಿತರ ವಸ್ತುಗಳನ್ನು ವಿತರಿಸಿದರು.

ಕೊಡುಗೆ ಸ್ವೀಕರಿಸಿದ ಸಂಸ್ಥೆ ಮುಖ್ಯಸ್ಥ ಡಾ. ಉಮೇಶ್ ಪ್ರಭು, ಸಂಸ್ಥೆಯ ಸಂಕಷ್ಟ ಸಮಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಆಡಳಿತಾಧಿಕಾರಿ ಉದಯ ಸ್ವಾಗತಿಸಿ, ರೋಟರಿ ಕಾರ್ಯದರ್ಶಿ ದೀಪಾ ಭಂಡಾರಿ ವಂದಿಸಿದರು.

ರೋಟರಿ ಸದಸ್ಯರಾದ ದಿನೇಶ್ ಭಂಡಾರಿ, ಗುರುರಾಜ ಭಟ್, ವನಿತಾ ಉಪಾಧ್ಯಾಯ, ಜೆ. ಜಿ. ಪ್ರಭು, ಸತ್ಯವತಿ ಹೆಬ್ಬಾರ್, ಅಮಲ, ಶುಭ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!