Saturday, July 2, 2022
Home ಸಮಾಚಾರ ಸಂಘಸಂಗತಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರಿಗೆ ಸನ್ಮಾನ

ಸಮುದಾಯ ಆರೋಗ್ಯ ಕೇಂದ್ರ ವೈದ್ಯರಿಗೆ ಸನ್ಮಾನ

ಬ್ರಹ್ಮಾವರ: ಇಲ್ಲಿನ ಸುವರ್ಣ ಎಂಟರ್ ಪ್ರೈಸಸ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರಾದ ಡಾ. ಅಜಿತ್ ಕುಮಾರ್ ಶೆಟ್ಟಿ, ಡಾ. ಮಹೇಶ್ ಐತಾಳ, ಡಾ. ಎರಿಕ್ ಫೆರ್ನಾಡಿಸ್ ಮತ್ತು ಡಾ. ಮಹಾಬಲ ಕೆ. ಎಸ್. ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ನಡೆಸಲಾದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸುಮಾರು 3 ಸಾವಿರ ವಿವಿಧ ಜಾತಿಯ ಹಣ್ಣು ಮತ್ತು ಔಷಧೀಯ ಸಸಿಗಳನ್ನು ವಿತರಿಸಲಾಯಿತು.

ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕ ಡಾ. ರಾಮಚಂದ್ರ ಕಾಮತ್ ಹಾಗೂ ರಾಜ್ಯ ವೈದ್ಯಕೀಯ ಪ್ರಕೋಷ್ಠ ಪದಾಧಿಕಾರಿ ಡಾ. ವಿಜಯೇಂದ್ರ ವಸಂತ್ ಅಭ್ಯಾಗತರಾಗಿದ್ದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ ಹೇರೂರು ಪ್ರಸ್ತಾವನೆಗೈದರು.

ಸುವರ್ಣ ಎಂಟರ್ ಪ್ರೈಸಸ್ ಮುಖ್ಯಸ್ಥೆ ಸುನೀತಾ ಮಧುಸೂದನ್, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಿಲ್ಟನ್ ಒಲಿವೆರಾ, ದರ್ಶಕ್, ವಿವೇಕಾನಂದ ಕಾಮತ್ ಮೊದಲಾದವರಿದ್ದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!