Sunday, July 3, 2022
Home ಸಮಾಚಾರ ಸಂಘಸಂಗತಿ ನಿಸ್ವಾರ್ಥ ಸೇವೆಯೊಂದೇ ಶಾಶ್ವತ

ನಿಸ್ವಾರ್ಥ ಸೇವೆಯೊಂದೇ ಶಾಶ್ವತ

ಬ್ರಹ್ಮಾವರ: ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವುದು ನಾವು ಮಾಡುವ ಉತ್ತಮ ಸೇವೆ ಮಾತ್ರ. ಅದು ನಿಸ್ವಾರ್ಥವಾಗಿರಬೇಕು. ಆದರೆ, ನಾವು ಹಣ, ಅಧಿಕಾರದ ದಾಸರಾಗಲು ಹೋಗುತ್ತಿರುವುದು ಸರಿಯಲ್ಲ ಎಂದು ಇಲ್ಲಿನ ಎಸ್.ಎಂ.ಎಸ್. ಕೆಥೆಡ್ರಲ್ ನ ವಿಗಾರ್ ಜನರಲ್ ಫಾ| ಎಂ.ಸಿ. ಮಥಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಜಯಂಟ್ಸ್ ಗ್ರೂಪ್ ಈಚೆಗೆ ಸಿಟಿ ಸೆಂಟರ್ ನಲ್ಲಿ ನಡೆದ ಗ್ರೂಪ್ನ ಮಹಾಸಭೆ ಹಾಗೂ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಸಂಪತ್ತು ಜಗತ್ತಿನ ಶ್ರೇಷ್ಠ ಸಂಪತ್ತು. ಅದನ್ನು ಅರಿತು ಕಾರ್ಯನಿರ್ವಹಿಸಬೇಕು. ನಮ್ಮ ಗಳಿಕೆಯ ಸ್ವಲ್ಪಾಂಶವನ್ನಾದರೂ ಸಮಾಜಕ್ಕೆ ಅರ್ಪಿಸಬೇಕು ಎಂದರು.

ಜಯಂಟ್ಸ್ ಉಡುಪಿ ಯೂನಿಟ್ ಡೈರೆಕ್ಟರ್ ದೇವದಾಸ್ ಕಾಮತ್, ಹೆಚ್ಚೆಚ್ಚು ಮಂದಿ ಉತ್ಸಾಹಿ ಯುವಜನತೆಯನ್ನು ಸಂಸ್ಥೆಗೆ ಸೇರ್ಪಡೆಗೊಳಿಸುವ ಮೂಲಕ ಇನ್ನಷ್ಟು ಉತ್ತಮ ಕಾರ್ಯ ನಡೆಯಲಿ ಎಂದು ಆಶಿಸಿದರು.

ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ ಹೇರೂರು, ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್, ಕಾರ್ಯದರ್ಶಿ ಶ್ರೀನಾಥ ಕೋಟ ಮೊದಲಾದವರಿದ್ದರು.

ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಸಾಹಿತಿ ಡಾ| ಕಾತ್ಯಾಯನಿ ಕುಂಜಿಬೆಟ್ಟು, ರೂಬಿಕ್ ಕ್ಯೂಬ್ ಸಾಧಕ ಮಹೇಶ್ ಮಲ್ಪೆ ಅವರನ್ನು ಗೌರವಿಸಲಾಯಿತು.

ನೂತನ ಸದಸ್ಯರಾದ ಉಮೇಶ್ ಬಿರ್ತಿ, ರೊನಾಲ್ಡ್, ಅನಿಲ್ ಶೆಟ್ಟಿ, ನಂದಿನಿ ಅವರನ್ನು ಬರಮಾಡಿಕೊಳ್ಳಲಾಯಿತು.

ವಿವೇಕ್ ಕಾಮತ್, ಮಿಲ್ಟನ್ ಒಲಿವರ್ ಪರಿಚಯಿಸಿದರು. ಸುಂದರ ಪೂಜಾರಿ ಸ್ವಾಗತಿಸಿ, ವರದಿ ವಾಚಿಸಿದರು. ಮಧುಸೂದನ ಹೇರೂರು ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!