Monday, July 4, 2022
Home ಸಮಾಚಾರ ಸಂಘಸಂಗತಿ ರೋಟರಿ ಉಡುಪಿಯಿಂದ ವನಮಹೋತ್ಸವ

ರೋಟರಿ ಉಡುಪಿಯಿಂದ ವನಮಹೋತ್ಸವ

ಉಡುಪಿ: ರೋಟರಿ ಉಡುಪಿ ಮತ್ತು ಇಂದಿರಾ ಶಿವರಾವ್ ಪೋಲಿಟೆಕ್ನಿಕ್ ಮೂಡುಪೆರಂಪಳ್ಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವನಮಹೋತ್ಸವ ಕಾರ್ಯಕ್ರಮವನ್ನು ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪೋಲಿಟೆಕ್ನಿಕ್ ಸಂಸ್ಥೆ ಆವರಣದಲ್ಲಿ ಉತ್ತಮ ತಳಿಯ ಗೇರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಪ್ರಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ವನಮಹೋತ್ಸವ ಆಚರಣೆ ಸ್ವಾಗತಾರ್ಹ ಎಂದರು.

ಸಂಸ್ಥೆ ಸಂಚಾಲಕ ಯು. ಕೆ. ರಾಘವೇಂದ್ರ ರಾವ್, ಪ್ರಾಂಶುಪಾಲೆ ಪವಿತ್ರ ಡಿ., ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಯು. ಕಾಂತ್, ಕಾರ್ಯದರ್ಶಿ ಜೆ. ಜಿ. ಪ್ರಭು, Environment Mission ಸಂಯೋಜಕಿ ರಂಜಿತಾ ಶೇಟ್ ಇದ್ದರು.

ರೋಟರಿ ಮಾಜಿ ಅಧ್ಯಕ್ಷ ಬಿ. ವಿ. ಲಕ್ಷ್ಮೀನಾರಾಯಣ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!