Saturday, July 2, 2022
Home ಸಮಾಚಾರ ಸಂಘಸಂಗತಿ ಪತ್ರಕರ್ತರಿಗೆ ಸಸಿ ವಿತರಣೆ

ಪತ್ರಕರ್ತರಿಗೆ ಸಸಿ ವಿತರಣೆ

ಉಡುಪಿ: ಬ್ರಹ್ಮಾವರದ ಸುವರ್ಣ ಎಂಟರ್ ಪ್ರೈಸಸ್, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಬ್ರಹ್ಮಾವರ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಪತ್ರಕರ್ತರಿಗೆ ಔಷಧೀಯ ಮತ್ತು ಹಣ್ಣಿನ ಸಸಿಗಳು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.

ಗಿಡಗಳ ಪ್ರಾಯೋಜಕ ಮಧುಸೂದನ ಹೇರೂರು ಮಾತನಾಡಿ, ಈಗಾಗಲೇ ವಿವಿಧ ಧಾರ್ಮಿಕ ಕೇಂದ್ರಗಳಿಗೆ 3 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೂ ಸಸಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಸುವರ್ಣ ಎಂಟರ್ ಪ್ರೈಸಸ್ ಮುಖ್ಯಸ್ಥೆ ಸುನೀತಾ ಮಧುಸೂದನ್, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಿಲ್ಟನ್ ಒಲಿವೇರಾ, ದರ್ಶಕ್, ಗಣೇಶ್ ಪ್ರಸಾದ್ ಜಿ. ನಾಯಕ್, ಜಗದೀಶ್ ಶೆಟ್ಟಿ ಇದ್ದರು.

ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!