ಮಣಿಪಾಲ: ರೋಟರಿ ಕ್ಲಬ್ ಪರಸ್ಪರ ಪ್ರೀತಿ ಗೌರವ ನೀಡುತ್ತ, ಸಂತ್ರಸ್ತ ಪ್ರಪಂಚಕ್ಕೆ ಸೇವೆ ನೀಡುವ, ಅನುಭವಗಳ ಮೇಲೆ ಸದಸ್ಯರನ್ನು ಸಮಾಜಕ್ಕೆ ಸಿದ್ಧಪಡಿಸುವ ಸಂಘಟನೆ ಎಂದು ರೋಟರಿ ಪಿಡಿಜಿ ಅಭಿನಂದನ್ ಶೆಟ್ಟಿ ಹೇಳಿದರು.
ಶನಿವಾರ ಪರ್ಕಳದಲ್ಲಿ ನಡೆದ ಮಣಿಪಾಲ ಟೌನ್ ಪದಗ್ರಹಣ ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.
ರೋಟರಿ ಜಿಲ್ಲಾ 3182 ಅತ್ಯಂತ ಬೃಹತ್ ಮಟ್ಟದ ಅಂತಾರಾಷ್ಟ್ರೀಯ ಅನುದಾನದಿಂದ ಮಾಹೆ ರೋಟರಿ ಸ್ಕಿನ್ ಬ್ಯಾಂಕ್ ಸಮಾಜಕ್ಕೆ ರೋಟರಿ ಕ್ಲಬ್ ಮಣಿಪಾಲ ಟೌನ್ ನೇತೃತ್ವದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು
ನೂತನ ಅಧ್ಯಕ್ಷ ಗಣೇಶ್ ನಾಯಕ್ ಹಾಗೂ ಕಾರ್ಯದರ್ಶಿ ಪ್ರವೀಣ್ ಹೂಗಾರ್ ಅವರ ನೂತನ ತಂಡಕ್ಕೆ ಅಧಿಕಾರ ಹಸ್ತಾಂತರಿಸಲಾಯಿತು.
ವಿಶೇಷ ಅಭ್ಯಾಗತರಾಗಿ ರೋಟರಿ ಸದಸ್ಯರಾದ ಎಜಿ ಡಾ. ಸುರೇಶ್ ಶೆಣೈ, ಮಾಹೆ ಎಸ್ಟೇಟ್ ಅಧಿಕಾರಿ ಕೆ. ಜೈವಿಠ್ಠಲ್ ಮತ್ತು ವಲಯ ಸೇನಾನಿ ಸಚ್ಚಿದಾನಂದ ನಾಯಕ್ ಭಾಗವಹಿಸಿದ್ದರು.
ನಿರ್ಗಮನ ಅಧ್ಯಕ್ಷ ಡಾ. ರವೀಂದ್ರನಾಥ ನಾಯಕ್ ಮತ್ತು ನಿರ್ಗಮನ ಕಾರ್ಯದರ್ಶಿ ಜ್ಯೋತಿ ರವಿಂದ್ರನಾಥ ವೇದಿಕೆಯಲ್ಲಿದ್ದರು.
ಸ್ಕಿನ್ ಬ್ಯಾಂಕಿಗೆ 15 ಲಕ್ಷ ರೂ. ನೆರವು ನೀಡಿದ ಅಭಿನಂಧನ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಡಾ. ಗುರುಮೂರ್ತಿ ಸಂಗಮ್ ನಿರೂಪಿಸಿದರು.