Thursday, July 7, 2022
Home ಸಮಾಚಾರ ಸಂಘಸಂಗತಿ ನಿಸ್ವಾರ್ಥ ಸೇವೆಯಿಂದ ಸಾರ್ಥಕತೆ

ನಿಸ್ವಾರ್ಥ ಸೇವೆಯಿಂದ ಸಾರ್ಥಕತೆ

ಉಡುಪಿ: ಪ್ರತಿಯೊಬ್ಬರೂ ತಾವು ಮಾಡುವ ಸೇವೆಯಲ್ಲಿ ಸಾರ್ಥಕತೆ ಪಡೆದುಕೊಳ್ಳಬೇಕಾದರೆ, ಮಾಡುವ ಸೇವೆಯಲ್ಲಿ ನಿಸ್ವಾರ್ಥ ಮನೋಭಾವ ಹೊಂದಿರಬೇಕು ಎಂದು ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಕೆ. ಪ್ರಶಾಂತ್ ಶೆಟ್ಟಿ ಹೇಳಿದರು.

ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ನಡೆದ ಘಟಕಾಧಿಕಾರಿಗಳ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪೊಲೀಸ್, ಜಿಲ್ಲಾಡಳಿತ ಹಾಗೂ ಸರ್ಕಾರದ ಇತರ ಇಲಾಖೆಗಳಲ್ಲಿ ಕಾನೂನು ಸುವ್ಯವಸ್ಥೆ, ಪ್ರಾಕೃತಿಕ ವಿಕೋಪ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಗೃಹ ರಕ್ಷಕರಲ್ಲಿಯೂ ಸ್ವಯಂ ಸೇವೆ ಹಾಗೂ ನಿಸ್ವಾರ್ಥ ಮನೋಭಾವ ಜಾಗೃತವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕುಂದಾಪುರ, ಜಿಲ್ಲಾ ಉಪ ಕಮಾಂಡೆಂಟ್ ರಮೇಶ್, ಕಚೇರಿ ಅಧೀಕ್ಷಕಿ ಕವಿತಾ ಕೆ. ಸಿ, ಅಧಿಕಾರಿಗಳಾದ ಪ್ರಭಾಕರ ಸುವರ್ಣ ಕಾರ್ಕಳ, ಸ್ಟೀವನ್ ಪ್ರಕಾಶ್ ಬ್ರಹ್ಮಾವರ, ಕೆ. ಭಾಸ್ಕರ್ ಕುಂದಾಪುರ, ಕುಮಾರ ಉಡುಪಿ, ನವೀನ್ ಕುಮಾರ ಪಡುಬಿದ್ರಿ, ರಾಘವೇಂದ್ರ ಬೈಂದೂರು, ಶೇಖರ ಮಣಿಪಾಲ ಹಾಗೂ ಶ್ಯಾಮಲಾ ಎ. ಇದ್ದರು.

ಗೃಹ ರಕ್ಷಕ ದಳದ ಸೇವೆಯಲ್ಲಿ ಚಿನ್ನದ ಪದಕ ಪಡೆದುಕೊಂಡ ಡಾ. ಕೆ. ಪ್ರಶಾಂತ್ ಶೆಟ್ಟಿ ಹಾಗೂ ಕಾಪು ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್ ಅವರನ್ನು ಜಿಲ್ಲಾ ಘಟಕ ವತಿಯಿಂದ ಸನ್ಮಾನಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!