Thursday, July 7, 2022
Home ಸಮಾಚಾರ ಸಂಘಸಂಗತಿ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುಗೆ

ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಟ್ಯಾಬ್ ಕೊಡುಗೆ

ಉಡುಪಿ: ಇನ್ಫೋಸಿಸ್ ಪ್ರಾಯೋಜಿತ ಧ್ವನಿ ಫೌಂಡೇಶನ್ ನೀಡಿದ 51 ಟ್ಯಾಬ್ ಗಳ ವಿತರಣೆ ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ಈಚೆಗೆ ನಡೆಯಿತು.

ದ್ವಿತೀಯ ಪಿ.ಯು.ಸಿ.ಯಲ್ಲಿ ಓದುತ್ತಿರುವ ವಿದ್ಯಾಪೋಷಕ್ ಫಲಾನುಭವಿ 51 ಮಂದಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ದಾನಿ ಯು. ವಿಶ್ವನಾಥ ಶೆಣೈ ಟ್ಯಾಬ್ ಹಸ್ತಾಂತರಿಸಿ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಹಾಯ ಮತ್ತು ಮಾರ್ಗದರ್ಶನ ದೊಡ್ಡ ಕೆಲಸ ಎಂದರು.

ವಿಶ್ರಾಂತ ಪ್ರಾಚಾರ್ಯ ಪ್ರೊ. ಕೆ. ಸದಾಶಿವ ರಾವ್, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಶುಭ ಹಾರೈಸಿದರು.

ಸಂಸ್ಥೆ ಕಾರ್ಯಕರ್ತರಾದ ಎಚ್. ಎನ್. ಶೃಂಗೇಶ್ವರ, ಎ. ನಟರಾಜ ಉಪಾಧ್ಯ, ವರುಣ್ ಮಧ್ಯಸ್ಥ, ಅಶೋಕ್ ಎಂ. ಮತ್ತು ಮಂಜುನಾಥ ಇದ್ದರು.

ಸಹ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!