ಉಡುಪಿ: ಇಲ್ಲಿನ ಪುತ್ತೂರು ವಿದ್ಯಾನಿಧಿ ಸಮಿತಿ ಆಶ್ರಯದ ವಿದ್ಯಾದೇಗುಲದಲ್ಲಿ ಸ್ಥಾಪಿಸಲಾದ ಪೇಜಾವರ ಶ್ರೀ ವಿಶ್ವೇಶತೀರ್ಥ ದತ್ತಿನಿಧಿಯಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 7 ಮಂದಿ ವಟುಗಳಿಗೆ ಸಾಮೂಹಿಕ ಉಚಿತ ಬ್ರಹ್ಮೋಪದೇಶ ನಡೆಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ತ್ರಿಕಾಲಗಳಲ್ಲಿ ಸಂಧ್ಯಾವಂದನೆ ಮಾಡಿ ಜೀವನ ಸಾರ್ಥಕ್ಯವನ್ನು ಕಂಡುಕೊಳ್ಳಬೇಕು ಎಂದರು.
ಉಡುಪಿ ಪುತ್ತೂರು ವಲಯ ಬ್ರಾಹ್ಮಣ ಸಭಾ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ, ವಿದ್ಯಾದೇಗುಲ ಅಧ್ಯಕ್ಷ ಚಂದ್ರಶೇಖರ ಅಡಿಗ, ಸ್ಥಾಪಕ ಅಧ್ಯಕ್ಷ ಕೆ. ಮಾಧವ ಉಪಾಧ್ಯ ಮೊದಲಾದವರಿದ್ದರು