Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಅಟಲ್ ಜನ್ಮದಿನ: ಉಚಿತ ನೇತ್ರ ಶಸ್ತ್ರ ಚಿಕಿತ್ಸೆ

ಅಟಲ್ ಜನ್ಮದಿನ: ಉಚಿತ ನೇತ್ರ ಶಸ್ತ್ರ ಚಿಕಿತ್ಸೆ

ಉಡುಪಿ: ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆ ಪ್ರಯಕ್ತ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಮಣಿಪಾಲದ ಹೊಸ ಬೆಳಕು ಆಶ್ರಯಧಾಮದ ಮೂವರು ವಯೋವೃದ್ಧರಿಗೆ ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆಯ ಉಚಿತ ಶಸ್ತ್ರಚಿಕಿತ್ಸೆ ನೀಡುವ ಮೂಲಕ ಅಂಧರಿಗೆ ದೃಷ್ಟಿ ನೀಡುವ ಮಾನವೀಯ ಸತ್ಕಾರ್ಯ ನಡೆಸಲಾಯಿತು.

ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಪ್ರಧಾನಿ ವಾಜಪೇಯಿ ಸಾಧನೆಗಳನ್ನು ಉಲ್ಲೇಖಿಸಿ ಅವರ ಗುಣಗಾನಗೈದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ನೇತ್ರ ತಜ್ಞ ಡಾ. ಕೃಷ್ಣ ಪ್ರಸಾದ್, ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಬಗ್ಗೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವಹಿಸಿರುವ ಕಾಳಜಿ ಮತ್ತು ಆಸಕ್ತಿಯನ್ನು ಪ್ರಶಂಸಿಸಿದರು. ಮುಂದೆಯೂ ತಮ್ಮ ಸಂಸ್ಥೆ ಮೂಲಕ ಸಹಕಾರ ನೀಡುವುದಾಗಿ ತಿಳಿಸಿದರು.

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಪ್ರಸ್ತಾವನೆಗೈದು, ಮೋರ್ಚಾ ವತಿಯಿಂದ ನಡೆಸಲಾದ ವಿವಿಧ ಚಟುವಟಿಕೆಗಳ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜ ಶೆಟ್ಟಿಗಾರ್, ರಮಾನಂದ ಸಾವಂತ ಸರಳೇಬೆಟ್ಟು, ಹೊಸಬೆಳಕು ಆಶ್ರಮ ಮೇಲ್ವಿಚಾರಕ ವಿನಯಚಂದ್ರ, ಪ್ರಮುಖರಾದ ರಜನಿ ಹೆಬ್ಬಾರ್, ನೀರಜಾ ಶೆಟ್ಟಿ, ಪೂರ್ಣಿಮಾ ರತ್ನಾಕರ ಶೆಟ್ಟಿ, ರೇಣುಕಾ, ಮಾಲತಿ, ಗಾಯತ್ರಿ ಪ್ರಭು, ಶೋಭಾ ಶೆಟ್ಟಿ, ಸರೋಜಾ ದೇವಾಡಿಗ, ಸುಧಾ ಪೈ, ಆಶಾ ಶೆಟ್ಟಿ, ಪೂರ್ಣಿಮಾ, ಭಾರತಿ ಚಂದ್ರಶೇಖರ್, ಶಿಲ್ಪ, ಲೈಲಾ, ಮಂಜುಳ ಪ್ರಸಾದ್, ರಶ್ಮಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!