Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಮುಂದಿನ ಚುನಾವಣೆಯಲ್ಲೂ ಬಾದಾಮಿಯಿಂದಲೇ ಸ್ಪರ್ಧೆ

ಮುಂದಿನ ಚುನಾವಣೆಯಲ್ಲೂ ಬಾದಾಮಿಯಿಂದಲೇ ಸ್ಪರ್ಧೆ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
********************************

(ಸುದ್ದಿಕಿರಣ ವರದಿ)

ಬೆಂಗಳೂರು, ಜು. 6: ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನಾನು ಬಾದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ.

ಇದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಎಸ್. ಸಿದ್ದರಾಮಯ್ಯ ಅವರ ಸ್ಪಷ್ಟ ನುಡಿ.

`ನಾನು ಚಾಮರಾಜಪೇಟೆ ಅಳಿಯ’ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸದೆದುರು ಇಂದು ಬಾದಾಮಿಯ ನೂರಾರು ಬೆಂಬಲಿಗರು ಜಮಾಯಿಸಿದ್ದು, ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಬಾದಾಮಿ ಬಿಟ್ಟು ಚಾಮರಾಜಪೇಟೆಯಿಂದ ಸೇರಿದಂತೆ ಎಲ್ಲೂ ಚುನಾವಣೆಗೆ ನಿಲ್ತೀನಿ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ.

`ನನಗೆ ಕೋಲಾರ, ಚಾಮರಾಜಪೇಟೆ, ಕೊಪ್ಪಳ ಎಲ್ಲಾ ಕಡೆಯಿಂದ ಚುನಾವಣೆಗೆ ನಿಲ್ಲುವಂತೆ ಆಹ್ವಾನಿಸಿದ್ದಾರೆ. ಆದರೆ, ನಾನು ಎಲ್ಲಿಯೂ ಚಾಮರಾಜಪೇಟೆಯಿಂದ ನಿಲ್ತೀನಿ ಅಂತ ಹೇಳಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಆದಾಗ ಅಶೋಕ್ ಕೇಳಿದಾಗ ನಾನು ಬಾದಾಮಿ ಶಾಸಕ ಎಮದೇ ಹೇಳಿದ್ದೆ ಎಂದರು.

ಈ ವೇಳೆ ಅಭಿಮಾನಿಗಳು ಭಾರೀ ಕರತಾಡನ, ಹರ್ಷೋದ್ಗಾರದ ಮೂಲಕ ಸಂಭ್ರಮಿಸಿದರು.

`ಬಾದಾಮಿ ಕ್ಷೇತ್ರದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ಒಬ್ಬ ಶಾಸಕನಾದವನು ದಿನನಿತ್ಯ ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕು. ನಾನು ಅಲ್ಲಿಗೆ ಹೆಚ್ಚು ಬರಲು ಆಗ್ತಿಲ್ಲ’ ಎಂದರು.

`ಬಾದಾಮಿ ಕ್ಷೇತ್ರದ ಜನ ಬಹಳ ಒಳ್ಳೆಯವರು. ನಿಮ್ಮನ್ನು ಖುಷಿಪಡಿಸಲು ಈ ಮಾತು ಹೇಳ್ತಿಲ್ಲ. ಇನ್ನೂ ಎರಡು ವರ್ಷ ಇದೆ. ಏನೇನೆಲ್ಲ ಮಾಡಲು ಸಾಧ್ಯವೋ ಎಲ್ಲ ಮಾಡ್ತೀನಿ. ನಾನು ನಿಮಗೆ ನೀರು, ಆಸ್ಪತ್ರೆ, ಜವಳಿ ಪಾರ್ಕ್ ಕೊಡಿಸಿರೋದೆಲ್ಲ ಒಬ್ಬ ಶಾಸಕನಾಗಿ ಮಾಡಬೇಕಾದ ಕೆಲಸ ಮಾಡಿದ್ದೇನೆ. ಅಷ್ಟೇ’ ಎಂದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!