Thursday, December 2, 2021
Home ಸಮಾಚಾರ ಅಪರಾಧ ನೀರು ಪಾಲಾದ ಈರ್ವರು ಬಾಲಕರ ಶವ ಪತ್ತೆ

ನೀರು ಪಾಲಾದ ಈರ್ವರು ಬಾಲಕರ ಶವ ಪತ್ತೆ

ನೀರು ಪಾಲಾದ ಈರ್ವರು ಬಾಲಕರ ಶವ ಪತ್ತೆ
(ಸುದ್ದಿಕಿರಣ ವರದಿ)

ಬ್ರಹ್ಮಾವರ: ಉಗ್ಗೇಲುಬೆಟ್ಟು ಮಡಿಸಾಲು ಬಳಿ ನದಿಯಲ್ಲಿ ಈಜಲೆಂದು ತೆರಳಿ ನೀರು ಪಾಲಾಗಿದ್ದ ಇಬ್ಬರು ಬಾಲಕರ ಮೃತದೇಹ ಬುಧವಾರ ಪತ್ತೆಯಾಗಿದೆ.

ಮೃತರಾದವರನ್ನು ಅನಾಸ್(16), ಶ್ರೇಯಸ್ (18) ಎಂದು ಗುರುತಿಸಲಾಗಿದ್ದು, ನಿನ್ನೆ ಮಡಿಸಾಲು ನದಿಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ಪೈಕಿ ಓರ್ವ ಪಾರಾಗಿದ್ದ. ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.

ಭಯ ಮತ್ತು ಗಾಬರಿಯಿಂದ ನೀರು ಪಾಲಾದ ಯುವಕರ ಬಗ್ಗೆ ಪಾರಾದ ಬಾಲಕ ಯಾವುದೇ ಮಾಹಿತಿ ನೀಡಿರಲಿಲ್ಲ.

ಕಾಣೆಯಾಗಿದ್ದ ಇಬ್ಬರು ಮಕ್ಕಳ ಮನೆಯವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ವಿಚಾರಣೆ ನಡೆಸಿದಾಗ ಬಾಲಕರು ನೀರು ಪಾಲಾದ ವಿಚಾರ ಬಯಲಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಿನ್ನೆ ಸಂಜೆಯಿಂದ ಸ್ವರ್ಣಾ ನದಿಯಲ್ಲಿ ಹುಡುಕಾಟ ಆರಂಭಿಸಿದ್ದರು.

ಈಜು ಪಟು ಈಶ್ವರ್ ಅವರನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಬಾಲಕರು ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಇಬ್ಬರು ಬಾಲಕರ ಮೃತ ದೇಹ ಹರಿಯುವ ನದಿಯಲ್ಲಿ ಪತ್ತೆಯಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!