Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ದಿನಕರ ದೇಸಾಯಿ ಕಾವ್ಯ ಪುರಸ್ಕಾರಕ್ಕೆ ಆಯ್ಕೆ

ದಿನಕರ ದೇಸಾಯಿ ಕಾವ್ಯ ಪುರಸ್ಕಾರಕ್ಕೆ ಆಯ್ಕೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ದಿನಕರ ದೇಸಾಯಿ ಕಾವ್ಯ ಪುರಸ್ಕಾರಕ್ಕೆ ಆಯ್ಕೆ
ಅಂಕೋಲ: ಇಲ್ಲಿನ ಡಾ| ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ ನೀಡುವ ರಾಷ್ಟ್ರ ಮಟ್ಟದ ದಿನಕರ ದೇಸಾಯಿ ಕಾವ್ಯ ಪುರಸ್ಕಾರಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜು ಉಪನ್ಯಾಸಕಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಮೈಸೂರಿನ ಮೌಲ್ಯ ಸ್ವಾಮಿ ಆಯ್ಕೆಯಾಗಿದ್ದಾರೆ.

ಕಾತ್ಯಾಯಿನಿ ಅವರ ಅವನು ಹೆಣ್ಣಾಗಬೇಕು ಹಾಗೂ ಮೌಲ್ಯ ಸ್ವಾಮಿ ಅವರ ಸುಮ್ಮನೆ ಬಿದ್ದಿರುವ ಬಿಕ್ಕುಗಳು ಕೃತಿಗಳಿಗೆ ಸಂಯುಕ್ತವಾಗಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಒಟ್ಟು 25 ಸಾವಿರ ರೂ. ಆಗಿದ್ದು, ಇಬ್ಬರಿಗೂ ಸಮಾನವಾಗಿ ಪ್ರಶಸ್ತಿ ಮೊತ್ತ ವಿತರಿಸಲಾಗುವುದು. ಆದರೆ, ಪ್ರಶಸ್ತಿ ಫಲಕ ಹಾಗೂ ಸಂಮಾನ ಪ್ರತ್ಯೇಕವಾಗಿ ನೀಡಲಾಗುವುದು.

ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರತಿಷ್ಠಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!