Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ವಿದ್ಯಾಪೋಷಕ್ ನ 24ನೇ ಮನೆ ಹಸ್ತಾಂತರ

ವಿದ್ಯಾಪೋಷಕ್ ನ 24ನೇ ಮನೆ ಹಸ್ತಾಂತರ

ಸುದ್ದಿಕಿರಣ ವರದಿ
ಮಂಗಳವಾರ, ಮಾರ್ಚ್ 22

ವಿದ್ಯಾಪೋಷಕ್ ನ 24ನೇ ಮನೆ ಹಸ್ತಾಂತರ
ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ಅಕ್ಷಯ್ ಕುಮಾರ್ ಮತ್ತು ಅವನ ತಂದೆ ಯಕ್ಷಗಾನ ಹಿಮ್ಮೇಳ ವಾದಕ ಹೆರಂಜಾಲು ಬಾಲಕೃಷ್ಣ ಗಾಣಿಗ ಅವರಿಗೆ ನಾಗೂರಿನಲ್ಲಿ ನಿರ್ಮಿಸಿಕೊಟ್ಟ ಮನೆ ಸಾಯಿಮಯಿಯ ಹಸ್ತಾಂತರ ಈಚೆಗೆ ನಡೆಯಿತು.

ಮನೆಯ ಪ್ರಾಯೋಜಕ ಮಂಗಳೂರಿನ ವೈದ್ಯ ಡಾ. ಜೆ. ಎನ್. ಭಟ್ ಉದ್ಘಾಟಿಸಿ ಈ ಮನೆಯಲ್ಲಿ ನೆಮ್ಮದಿಯಿಂದ ಬದುಕಿ, ದೊಡ್ಡ ಸಾಧನೆ ಮಾಡಿ, ಉಳಿದವರಿಗೆ ಆಸರೆಯಾಗಬೇಕು ಎಂದು ಅಕ್ಷಯನಿಗೆ ಕಿವಿಮಾತು ಹೇಳಿದರು.

ಮುಖ್ಯ ಅಭ್ಯಾಗತರಾಗಿದ್ದ ಸಂಸ್ಥೆಯ ದಾನಿ ಪಿ. ಗೋಕುಲನಾಥ ಪ್ರಭು ಮಾತನಾಡಿ, ತಮ್ಮ ಮಾತೃಶ್ರೀಯವರ 100ನೇ ವರ್ಷದ ಪ್ರಯುಕ್ತ ಒಂದು ಮನೆಯನ್ನು ಸಂಸ್ಥೆ ಮೂಲಕ ನಿರ್ಮಿಸಿ ಕೊಡಬೇಕೆಂದು ಸಂಕಲ್ಪಿಸಿರುವುದಾಗಿ ತಿಳಿಸಿದರು.

ಪ್ರೊ. ಎಂ. ಎಲ್ ಸಾಮಗ ಅವರು ಡಾ. ಜೆ. ಎನ್. ಭಟ್ ಅವರನ್ನು ಪರಿಚಯಿಸಿದರು.

ಉದ್ಯಮಿ ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ಎಸ್. ವಿ. ಭಟ್ ಮತ್ತು ವಿ. ಜಿ. ಶೆಟ್ಟಿ, ಕಲಾವಿದ ಹೆರಂಜಾಲು ಗೋಪಾಲ ಗಾಣಿಗ ಮತ್ತು ಸಂಸ್ಥೆಯ ಕಾರ್ಯಕರ್ತರು ಇದ್ದರು.

ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ, ಸಂಸ್ಥೆಯ ಕೆಲಸಕ್ಕೆ ಸಮಾಜದ ದಾನಿಗಳು ಮುಕ್ತ ಹಸ್ತದಿಂದ ಸಹಾಯ ಮಾಡುತ್ತಿರುವುದನ್ನು ಸ್ಮರಿಸಿದರು. ಪಿ. ಗೋಕುಲನಾಥ ಪ್ರಭು, ಡಾ. ಜೆ. ಎನ್. ಭಟ್ರಂಥ ದಾನಿಗಳು ಸಂಸ್ಥೆಯ ಆಸ್ತಿ ಎಂದರು. ಜೊತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.

ಇದು ಯಕ್ಷಗಾನ ಕಲಾರಂ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ನಿರ್ಮಿಸಿದ 24ನೇ ಮನೆಯಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!