Wednesday, July 6, 2022
Home ಕ್ರೀಡೆ ಅಥ್ಲೆಟ್ ವಿದ್ಯಾರ್ಥಿನಿಗೆ ನೆರವು

ಅಥ್ಲೆಟ್ ವಿದ್ಯಾರ್ಥಿನಿಗೆ ನೆರವು

ಉಡುಪಿ: ಅಸ್ಸಾಂನಲ್ಲಿ ನಡೆಯಲಿರುವ ನ್ಯಾಷನಲ್ ಲೆವೆಲ್ ಅಥ್ಲೆಟಿಕ್ ಗೆ ಆಯ್ಕೆಯಾದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿನಿ ಶ್ರದ್ಧಾ ಕುಂದರ್ ಅವರಿಗೆ ಸ್ಪರ್ಧೆಗೆ ತೆರಳಲು ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಸೌರಭ್ ಬಲ್ಲಾಳ್ ನೇತೃತ್ವದಲ್ಲಿ ಸಂಗ್ರಹಿಸಿದ 40 ಸಾವಿರ ರೂ. ಮೊತ್ತವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಸ್ತಾಂತರಿಸಿದರು.

ಸಮಾಜಸೇವಕ, ಕಾಂಗ್ರೆಸ್ ಮುಂದಾಳು ಕೃಷ್ಣಮೂರ್ತಿ ಆಚಾರ್ಯ ಧನಸಹಾಯ ನೀಡಿ ಸಹಕರಿಸಿದ್ದರು.

ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಹರಿಶ್ಚಂದ್ರ ಕೊಡವೂರು, ಎನ್.ಎಸ್.ಯು.ಐ.ನ ರೆಯಾನ್ಸ್, ತಿಲಕ್, ಕಾರ್ತಿಕ್, ಕೋಚ್ ಕಿಶೋರ್ ಕುಮಾರ್, ರವಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!