Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಹಿಂದೂ ಧರ್ಮದಲ್ಲಿದೆ ಪ್ರಶ್ನಿಸುವ ಮನೋಭಾವ

ಹಿಂದೂ ಧರ್ಮದಲ್ಲಿದೆ ಪ್ರಶ್ನಿಸುವ ಮನೋಭಾವ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 10

ಹಿಂದೂ ಧರ್ಮದಲ್ಲಿದೆ ಪ್ರಶ್ನಿಸುವ ಮನೋಭಾವ
ಉಡುಪಿ: ಪ್ರಶ್ನಿಸುವ ಮನೋಭಾವದಿಂದ ಜ್ಞಾನ ಹೆಚ್ಚಾಗುತ್ತದೆ. ಆದರೆ, ದುರಾದೃಷ್ಟವಶಾತ್ ಹಿಂದೂ ಧರ್ಮ ಹೊರತುಪಡಿಸಿ ಉಳಿದ ಯಾವುದೇ ಧರ್ಮಗಳು ಪ್ರಶ್ನಿಸುವ ಮನೋಭಾವವನ್ನು ಬೆಂಬಲಿಸುವುದಿಲ್ಲ ಎಂದು ಪಾಂಡಿಚೇರಿಯ ಋಷಿ ಧರ್ಮ ಫೌಂಡೇಶನ್ ಅಧ್ಯಕ್ಷ ಡಿ. ಎ. ಜೋಸೆಫ್ ಹೇಳಿದರು.

ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸ ಸ್ವೀಕಾರ ಸುವರ್ಣ ಮಹೋತ್ಸವ ಅಂಗವಾಗಿ ಇಲ್ಲಿನ ಶ್ರೀಕೃಷ್ಣ ಸೇವಾ ಬಳಗ ವತಿಯಿಂದ ಭಾನುವಾರ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಪ್ರಶ್ನೆಗಳಿಗಿದೆ ಉತ್ತರ
ಹಿಂದೂ ಧರ್ಮದಲ್ಲಿ ಮನುಷ್ಯನ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಇತರ ಧರ್ಮಗಳು ನಿರ್ದಿಷ್ಟ ಜೀವನ ಸಂಹಿತೆ ಪಾಲಿಸಲು ಸೂಚಿಸುತ್ತವೆ ಎಂದರು.

ದೇವರ ಮೇಲೆ ಭಕ್ತಿ ಹಾಗೂ ದುಷ್ಕೃತ್ಯಗಳು ಎಂದೂ ಜೊತೆ ಜೊತೆಯಾಗಿ ಸಾಗುವುದಿಲ್ಲ. ಆದ್ದರಿಂದ ಜೀವನದಲ್ಲಿಯೂ ಸದಾಚಾರ ಮತ್ತು ಅನುಷ್ಠಾನ ಅತ್ಯಗತ್ಯ. ಸತ್ಸಂಗಗಳಿಂದ ನಮಗೆ ಅರಿವಿಲ್ಲದಂತೆ ಆತ್ಮೋದ್ಧಾರ ಸಾಧ್ಯವಾಗುತ್ತದೆ. ದೈನಂದಿನ ಆಚಾರ ವಿಚಾರಗಳಿಗೂ, ವ್ಯಕ್ತಿತ್ವ ವಿಕಸನಕ್ಕೂ ಅಂತರ ಸಂಬಂಧ ಇದೆ ಎಂದರು.

ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಗಾಯಕ ಪ್ರಾದೇಶಾಚಾರ್ಯ ಪ್ರಾರ್ಥಿಸಿದರು. ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿ, ನಂದನ್ ಪ್ರಭು ನಿರೂಪಿಸಿದರು. ಗೋವಿಂದರಾಜ್ ಸಹಕರಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!