Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಗಿಡ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

ಗಿಡ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

ಗಿಡ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

(ಸುದ್ದಿಕಿರಣ ವರದಿ)
ಮಲ್ಪೆ: ಗಿಡ ನೆಡುವ ಮೂಲಕ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಡಗರವನ್ನು ಕೊಡವೂರು ಬ್ರಾಹ್ಮಣ ಮಹಾಸಭಾ ಸದಸ್ಯರು ಆಚರಿಸಿದರು. ಆ ಮೂಲಕ ಪ್ರಕೃತಿ ರಕ್ಷಣೆಯ ಕಾಳಜಿಯನ್ನು ಮೆರೆದರು.

ಮಹಾಸಭಾದ ರಜತೋತ್ಸವದ ಸರಣಿ ಕಾರ್ಯಕ್ರಮಗಳಲ್ಲಿ 12ನೇ ಕಾರ್ಯಕ್ರಮಮವಾಗಿ ಸ್ವಾತಂತ್ರ್ಯೋತ್ಸವದಂದು ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು. ರಜತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.

ಬಳಿಕ ಕಾರ್ಯಕ್ರಮದ ಸವಿನೆನಪಿಗಾಗಿ ಸಂಸ್ಥೆಯ ಸ್ವಂತ ಕಟ್ಟಡ ವಿಪ್ರಶ್ರೀ ಸುತ್ತಮುತ್ತ ಉತ್ತಮ ಜಾತಿಯ 25 ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಸಂಸ್ಥೆಯ ಗೌರವಧ್ಯಕ್ಷ ಗುರುರಾಜ ರಾವ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ನಾರಾಯಣ ಬಲ್ಲಾಳ್, ಹಿರಿಯರಾದ ಲಕ್ಷ್ಮೀನಾರಾಯಣ ಭಟ್, ವಸಂತ ರಾವ್, ರತ್ನ ಬಾಯರಿ ಹಾಗೂ ಪ್ರೇಮಾ ಬಾಯರಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟರು.

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಕ್ಕಳಿಗೆ ಆನ್ ಲೈನ್ ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಪರ್ಧೆ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ ಸ್ಪರ್ಧೆ ಹಾಗೂ ವಯಸ್ಕರಿಗೆ ಆನ್ ಲೈನ್ ನಲ್ಲಿ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು.

ಈ ಸಂದರ್ಭದಲ್ಲಿ ರಜತೋತ್ಸವ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ಉಪಾಧ್ಯ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್, ಸಂಚಾಲಕ ಸುಧೀರ್ ರಾವ್, ಕೋಶಾಧಿಕಾರಿ ಶ್ರೀಧರ ಶರ್ಮ, ಕಾರ್ಯದರ್ಶಿಗಳಾದ ಶ್ರೀನಿವಾಸ ಬಾಯರಿ ಮತ್ತು ಮುರಳೀಧರ ಭಟ್, ವಿಜಯಾ ದಿನೇಶ್, ಭಾರತಿ ಸುಬ್ರಹ್ಮಣ್ಯ, ನಿರ್ಮಲಾ ಎಂ. ಭಟ್, ಹರಿಣಿ ಕೃಷ್ಣಮೂರ್ತಿ, ಭಾರತಿ ಪ್ರಸಾದ್, ವಿದ್ಯಾ ಶ್ರೀಪತಿ ಬಾಯರಿ, ಶುಭಕರ, ಕಿರಣ್ ರಾವ್, ಚಂದನ್ ಹಾಗೂ ವನಮಹೋತ್ಸವ ಕಾರ್ಯಕ್ರಮ ಸಂಚಾಲಕ ಸುದರ್ಶನ ರಾವ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!