Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಕಣ್ಣಿಗೆ ಬಟ್ಟೆ ಕಟ್ಟಿ ಬೈಕ್ ಸವಾರಿ

ಕಣ್ಣಿಗೆ ಬಟ್ಟೆ ಕಟ್ಟಿ ಬೈಕ್ ಸವಾರಿ

ಉಡುಪಿ: ಹೈದರಾಬಾದ್ ನ ಜಾದೂಗಾರ ಜಿ. ರಾಮಕೃಷ್ಣ ಕಣ್ಣಿಗೆ ಪಟ್ಟಿ ಕಟ್ಟಿ ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ಬೈಕ್ ಸವಾರಿ ಮಾಡುತ್ತಿದ್ದು, ಉಡುಪಿಗೂ ಆಗಮಿಸಿದ್ದರು. ಅವರು ತೆರಳಿದ್ದ ಎಲ್ಲೆಡೆ ನಾಗರಿಕರು ಶುಭ ಹಾರೈಸಿ, ಅವರ ಸಾಹಸ ಶ್ಲಾಘಿಸಿದ್ದಾರೆ.

43ರ ಹರೆಯದ ರಾಮಕೃಷ್ಣ, ಕೊರೊನಾ ಬಗ್ಗೆ ಜನಜಾಗೃತಿ, ರಾಷ್ಟ್ರೀಯ ಭಾವೈಕ್ಯತೆ, ರಸ್ತೆ ಸುರಕ್ಷತೆ ಬಗ್ಗೆ ಜನಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ 10 ಸಾವಿರ ಕಿ.ಮೀ. ದೂರವನ್ನು ಕೇವಲ 31 ದಿನಗಳಲ್ಲಿ ಕ್ರಮಿಸುವ ಅವರ ಯೋಜನೆಗೆ ತೆಲಂಗಾಣ ಗೃಹಸಚಿವರು ಚಾಲನೆ ನೀಡಿದ್ದರು. ಭಾರತದ 121 ಜಿಲ್ಲೆಗಳಲ್ಲಿ ಅವರು ಬೈಕ್ ಸವಾರಿ ನಡೆಸಲಿದ್ದಾರೆ.

ಉಡುಪಿಗೆ ಆಗಮಿಸಿದ್ದಾಗ ಇಲ್ಲಿನ ಪ್ರಸಿದ್ಧ ಯಕ್ಷಿಣಿಗಾರರಾದ ಪ್ರೊ. ಶಂಕರ್ ಮತ್ತು ಜ್ಯೂನಿಯರ್ ಶಂಕರ್ ಅವರು ರಾಮಕೃಷ್ಣ ಅವರನ್ನು ಸ್ವಾಗತಿಸಿದರು.

ಮುಂದಿನ ಪಯಣಕ್ಕೆ ಶುಭ ಹಾರೈಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!