Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಪೂರ್ಣಪ್ರಜ್ಞ ಪ.ಪೂ. ಕಾಲೇಜು: ಉತ್ಕೃಷ್ಟ ಸಾಧನೆ

ಪೂರ್ಣಪ್ರಜ್ಞ ಪ.ಪೂ. ಕಾಲೇಜು: ಉತ್ಕೃಷ್ಟ ಸಾಧನೆ

ಸುದ್ದಿಕಿರಣ ವರದಿ
ಶನಿವಾರ, ಜೂನ್ 18

ಪೂರ್ಣಪ್ರಜ್ಞ ಪ.ಪೂ. ಕಾಲೇಜು: ಉತ್ಕೃಷ್ಟ ಸಾಧನೆ
ಉಡುಪಿ: ಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ಕೃಷ್ಟ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗ
ವಿಜ್ಞಾನ ವಿಭಾಗದ ಭವ್ಯ ನಾಯಕ್ (597) ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ನೀತಾ ಕೆ. ರಾವ್ (593) ಮತ್ತು ಸುಹಾಸ್ ಶೆಣೈ (593) 6ನೇ ಸ್ಥಾನ, ಶ್ರೇಯಾ ಆರ್. ಶೆಟ್ಟಿ (592), ಮೋಹನ್ ಎಸ್. ಆರ್. (592) 7ನೇ ರ್ಯಾಂಕ್, ವೃದ್ಧಿ ಶೆಟ್ಟಿ (590), ಗಜಾನನ ನಾಯಕ್ (590) 9ನೇ ಸ್ಥಾನ,, ನಂದನ್ ಉಪಾಧ್ಯಾಯ (589), ಸ್ವಾತಿ ಆರ್. ಕಿಣಿ (589), ವೈಷ್ಣವಿ ಆರ್. ಮೊಹರೆರ್ (589) 10ನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ
ವಾಣಿಜ್ಯ ವಿಭಾಗದ ಛಾಯಾ (592), ಆಕಾಶ್ ಶೇಟ್ (592) 5ನೇ ಸ್ಥಾನ, ಸ್ವಾತಿ ಕಾಮತ್ (590), ವಿರಾಜ್ ವಿ. ಶೆಟ್ಟಿ (590) 7ನೇ ರ್ಯಾಂಕ್, ಶ್ರೇಯಾ ಎಂ. ಬಲ್ಲಾಳ್ (589), ಶ್ರೀರಕ್ಷಾ ಎಂ. ಎಸ್. (589), ಪ್ರಾರ್ಥನಾ ಎಂ. ನಾಯಕ್ (589), ಅನನ್ಯ (587) 8ನೇ ರ್ಯಾಂಕ್, ಶ್ರೇಯಾ ವಿ. ಕುಂದರ್ (588), ಭೂಮಿಕಾ ಜೆ. ವಿ. (588), ಸ್ವಪ್ನ ಕೆ. ಎಚ್. (588) 9ನೇ ರ್ಯಾಂಕ್, ಐಶ್ವರ್ಯ ಎಸ್. (587), ಕ್ರಿಸಾನ್ ಮೋನಿಸ್ (587) 10ನೇ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 312 ವಿದ್ಯಾರ್ಥಿಗಳ ಪೈಕಿ 207 ಮಂದಿ, ವಾಣಿಜ್ಯ ವಿಭಾಗದಲ್ಲಿ 271 ವಿದ್ಯಾರ್ಥಿಗಳ ಪೈಕಿ 155 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ, ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಗೌರವ ಕಾರ್ಯದರ್ಶಿ ಡಾ. ಶಶಿಕಿರಣ್ ಉಮಾಕಾಂತ್, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!