Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸೌಹಾರ್ದತೆಯೊಂದಿಗೆ ಅಭಿವೃದ್ಧಿಗೆ ಕೊಡುಗೆ ನೀಡುವ ಬಂಟ ಸಮಾಜ

ಸೌಹಾರ್ದತೆಯೊಂದಿಗೆ ಅಭಿವೃದ್ಧಿಗೆ ಕೊಡುಗೆ ನೀಡುವ ಬಂಟ ಸಮಾಜ

ಸುದ್ದಿಕಿರಣ ವರದಿ
ಶನಿವಾರ, ಫೆಬ್ರವರಿ 19

ಸೌಹಾರ್ದತೆಯೊಂದಿಗೆ ಅಭಿವೃದ್ಧಿಗೆ ಕೊಡುಗೆ ನೀಡುವ ಬಂಟ ಸಮಾಜ
ಉಡುಪಿ: ತುಳುನಾಡಿನ ಪ್ರತಿಷ್ಠಿತ ಸಮಾಜಗಳಲ್ಲೊಂದಾದ ಬಂಟ ಸಮಾಜ, ಸೌಹಾರ್ದತೆಯಿಂದ ಬದುಕುವುದರೊಂದಿಗೆ ಸಮಾಜದ ಪ್ರತಿಯೊಂದೂ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.

ಕುಕ್ಕೆಹಳ್ಳಿ ಬಂಟರ ಸಂಘ ಉದ್ಘಾಟಿಸಿ ಮಾತನಾಡಿದರು.

ಬಂಟ ಸಮುದಾಯ ಸತ್ಯ, ಧರ್ಮ ಪಾಲನೆ ಮತ್ತು ಪ್ರಾಮಾಣಿಕತೆ ಹೊಂದಿರುವ ಸಮಾಜ ಎಂದರು.

ಸಂಘಟನೆಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೇ ತಮ್ಮ ಕೈಲಾದ ಸೇವೆ ಮಾಡುವುದರೊಂದಿಗೆ ಸಮಾಜದ ಅಶಕ್ತರಿಗೆ ನೆರವಿನ ಹಸ್ತ ಚಾಚುವುದರೊಂದಿಗೆ ಹೃದಯ ಶ್ರೀಮಂತಿಕೆ ಹೊಂದಬೇಕು. ವ್ಯಕ್ತಿ ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಆತನ ಬದುಕಿಗೆ ನಿಜವಾದ ಅರ್ಥ ಬರುತ್ತದೆ ಎಂದರು.

ಸಂಘದ ಲಾಂಛನವನ್ನು ಬರೋಡ ತುಳು ಸಂಘ ಅಧ್ಯಕ್ಷ ಶಶಿಧರ ಶೆಟ್ಟಿ ಅನಾವರಣಗೊಳಿಸಿದರು.

ಕುಕ್ಕೆಹಳ್ಳಿ ಬಂಟರ ಸಂಘ ಅಧ್ಯಕ್ಷ ಪ್ರಸಾದ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಬಂಟರ ಯಾನೆ ನಾಡವರ ಮಾತೃ ಸಂಘ ಸಂಚಾಲಕ ಜಯರಾಜ್ ಹೆಗ್ಡೆ, ಪೆರ್ಡೂರು ಬಂಟರ ಸಂಘ ಅಧ್ಯಕ್ಷ ಶಾಂತರಾಮ ಸೂಡ, ಹೆಬ್ರಿ ಬಂಟರ ಸಂಘ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಬೆಳ್ಳಪಂಳ್ಳಿ ಸಂಘದ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಗುಜರಾತ್ ಮೆರಿಡಿಯನ್ ಶಿಪ್ಪಿಂಗ್ ನ ಸದಾಶಿವ ಶೆಟ್ಟಿ, ಕುಂಜಾಲು ಪ್ರಕೃತಿ ಲೈಫ್ ಸೈನ್ಸ್ ಎಂ.ಡಿ. ದಿನೇಶ್ ಹೆಗ್ಡೆ, ಡಾ. ಕೆ ಧನಪಾಲ್ ಹೆಗ್ಡೆ, ಮುನಿಯಾಲು ಉದಯಕುಮಾರ್ ಶೆಟ್ಟಿ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಬರೊಡ ತುಳು ಸಂಘ ಅಧ್ಯಕ್ಷ, ಉದ್ಯಮಿ ಶಶಿಧರ ಶೆಟ್ಟಿ ಹಾಗೂ ಸೂರತ್ ಉದ್ಯಮಿ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!