Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಚಾಲ್ತಿ ಮತ್ತು ಉಳಿತಾಯ ಖಾತೆ ಅಭಿಯಾನ

ಚಾಲ್ತಿ ಮತ್ತು ಉಳಿತಾಯ ಖಾತೆ ಅಭಿಯಾನ

ಉಡುಪಿ: ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕಾದ ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಅವರಿಂದ ಈಚೆಗೆ ಉದ್ಘಾಟನೆಗೊಂಡ ಚಾಲ್ತಿ ಮತ್ತು ಉಳಿತಾಯ ಖಾತೆ ಮೂರು ತಿಂಗಳವಧಿಯ ಅಭಿಯಾನವನ್ನು ಉಡುಪಿ ಪ್ರಾದೇಶಿಕ ಕಚೇರಿಯಲ್ಲಿಯೂ ಚಾಲನೆ ನೀಡಲಾಯಿತು.
ಜ್ಯೋತಿ ಬೆಳಗಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಗೋಪಾಲಕೃಷ್ಣ ಸಾಮಗ, ಖಾಸಗಿ ರಂಗದ ಬ್ಯಾಂಕುಗಳಲ್ಲಿ ಕರ್ಣಾಟಕ ಬ್ಯಾಂಕ್ ಮುಂಚೂಣಿಯಲ್ಲಿದ್ದು ಉತ್ತಮ ಆಡಳಿತ ನೀಡುವ ಮೂಲಕ ಆಧುನಿಕ ತಂತ್ರಜ್ಞಾನ ಡಿಜಿಟಲ್ ಚಾನೆಲ್ ಗಳ ಮೂಲಕ ಇಂಟರ್ನೆಟ್ ಬ್ಯಾಂಕಿಂಗ್, ವೀಸಾ ಇಮೇಜ್ ಕಾರ್ಡ್, ರೂಪೇ ಪ್ಲಾಟಿನಮ್ ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್, ಕೆಬಿಎಲ್ ಭೀಮ್, ಯುಪಿಐ ಆ್ಯಪ್, ಕೆಬಿಎಲ್ ಎಂ ಪಾಸ್ ಬುಕ್ ಸೌಲಭ್ಯ ಒದಗಿಸುವುದರ ಜೊತೆಗೆ ಉಳಿತಾಯ ಖಾತೆ ಹೊಂದಿರುವ ಖಾತೆದಾರರಿಗೆ 10 ಲಕ್ಷ ರೂ. ವರೆಗೆ ಕೆಬಿಎಲ್ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಕೇವಲ 125 ರೂ. ಪ್ರೀಮಿಯಮ್ ನಲ್ಲಿ ಒದಗಿಸುತ್ತಿದೆ. ಅಭಿಯಾನವು ನ. 17ರಿಂದ ಆರಂಭಗೊಂಡಿದ್ದು, 2021ರ ಮಾ. 4ರ ವರೆಗೆ ನಡೆಯಲಿದೆ. ಹೊಸ ಹೊಸ ಗ್ರಾಹಕರಿಂದ ಖಾತೆ ತೆರೆಸುವ ಮೂಲಕ ಈ ಎಲ್ಲ ಪ್ರಯೋಜನ ತಲುವುಂತಾಗಲಿ ಎಂದು ಆಶಿಸಿದರು.
ಉಡುಪಿ ವಲಯದ 56 ಶಾಖೆಗಳ ಎಲ್ಲ ಸಿಬ್ಬಂದಿಗಳೂ ಇದರಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದರು.
ಮುಖ್ಯ ಪ್ರಬಂಧಕರಾದ ವಿಶ್ವನಾಥ ಎಸ್. ಆರ್., ವಾದಿರಾಜ್ ಕೆ., ಜಯಾನಂದ ದೇವಾಡಿಗ, ಚಕ್ರಪಾಣಿ ವಿ. ವಿ. ಹಾಗೂ ಬ್ಯಾಂಕಿನ ಸಿಬ್ಬಂದಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!