Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ `ಉಡುಪಿ ಜಿಲ್ಲಾ ಕಸಾಪಕ್ಕೆ ಹೊಸ ನೇತೃತ್ವ ಬೇಕು'

`ಉಡುಪಿ ಜಿಲ್ಲಾ ಕಸಾಪಕ್ಕೆ ಹೊಸ ನೇತೃತ್ವ ಬೇಕು’

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಸಮೀಪಿಸುತ್ತಿದ್ದು, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ (ಕಸಾಪ)ಗೆ ಹೊಸ ನೇತೃತ್ವ ಬೇಕು ಎಂದು ಕಸಾಪ ಸಾಮಾನ್ಯ ಸದಸ್ಯ, ಸಾಮಾಜಿಕ, ಕಾರ್ಯಕರ್ತಕರ್ತ ಜಿ. ವಾಸುದೇವ ಭಟ್ ಪೆರಂಪಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತವರ ತಂಡ ಎರಡು ಅವಧಿಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಿದೆ. ಆ ಬಗ್ಗೆ ಸಂದೇಹ ಇಲ್ಲ. ಆದರೆ, ಯಾವುದೇ ಸಂಘಸಂಸ್ಥೆಯಲ್ಲಿ ಚಲನಶೀಲತೆ ಮತ್ತು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಯೋಚನೆ- ಯೋಜನೆಗಳು ನಿರಂತರವಾಗಿ ಮೂಡಿಬರಬೇಕು. ಆದ್ದರಿಂದ ಬದಲಾವಣೆಯ ಆವಶ್ಯಕತೆ ಇದೆ ಎಂದವರು ತಿಳಿಸಿದ್ದಾರೆ.

ಆದಷ್ಟು ಬೇಗ ಕನ್ನಡ ಭವನ ನಿರ್ಮಾಣವಾಗಬೇಕು. ಕಸಾಪಕ್ಕೆ ಉಡುಪಿ ಜಿಲ್ಲೆಯಲ್ಲಿ ಕೇವಲ 2 ಸಾವಿರ ಆಸುಪಾಸಿನ ಆಜೀವ ಸದಸ್ಯರಿದ್ದಾರೆ. ಇದು ಎಷ್ಟು ಮಾತ್ರಕ್ಕೂ ಸಾಲದು. ಬಹಳ ದೊಡ್ಡ ಮಟ್ಟದಲ್ಲಿ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಸದಸ್ಯತ್ವ ನೋಂದಣಿಯಾಗುವ ಮೂಲಕ ಪರಿಷತ್ ಗೆ ಸಮಸ್ತ ಕನ್ನಡಿಗರ ಸಹಭಾಗಿತ್ವ ದೊರೆಯಬೇಕು ಎಂದೂ ವಾಸುದೇವ ಭಟ್ ಆಶಿಸಿದ್ದಾರೆ.

ಬದಲಾವಣೆಯಾಗಬೇಕು ಎನ್ನುವುದರ ಅರ್ಥ ತಾನು ನೇತೃತ್ವಕ್ಕೆ ಆಕಾಂಕ್ಷಿ ಎಂದಲ್ಲ. ನಾನು ಯಾವುದೇ ಪದಾಧಿಕಾರ ಅಪೇಕ್ಷೆಪಟ್ಟವನಲ್ಲ. ಕನ್ನಡದ ಹಿತ ಚಿಂತಕನಾಗಿ ಅಭಿಪ್ರಾಯಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!